K2kannadanews.in
Local news ರಾಯಚೂರು : 40 ಕಿ.ಮೀ ಅಂತರದೊಳಗೆ ಎರಡು ಟೋಲ್ ಗೇಟ್ ಅಳವಡಿಕೆ ಮಾಡಿರುವುದನ್ನು ಖಂಡಿಸಿ ಕೆಡಿಪಿ ಸಭೆಯಲ್ಲಿ ಶಾಸಕಿ ಕರೆಮ್ಮ ನಾಯಕ್ ಧರಣಿಗೆ ಕುಳಿತ ಘಟನೆ ನಡೆದಿದೆ.
ರಾಯಚೂರು ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಘಟನೆ ನಡೆದಿದೆ. 40 ಕಿ.ಮೀ ಅಂತರದೊಳಗೆ ಎರಡು ಟೋಲ್ ಗೇಟ್ ಅಳವಡಿಕೆ ಮಾಡಲಾಗಿದೆ. ಎರಡು ಟೋಲ್ ಗೇಟ್ ರದ್ದುಪಡಿಸುವಂತೆ ಆಗ್ರಹಸಿದ್ದಾರೆ. ಸಚಿವ ಶರಣಪ್ರಕಾಶ್ ಪಾಟೀಲ್ ವಿರುದ್ಧ ಕಿಡಿಕಾರಿದ ಶಾಸಕಿ ಕರೆಮ್ಮ ನಾಯಕ್ ಸಭೆಯಲ್ಲಿ ನೆಲದ ಮೇಲೆ ಕುಳಿತು ಪ್ರತಿಭಟನೆಗೆ ಮುಂದಾಗಿದ್ದಾರೆ. ನನ್ನ ಸಭೆಯಿಂದ ಹೊರಗೆ ಹಾಕಿದ್ರು ಚಿಂತೆ ಇಲ್ಲ, ಇದಕ್ಕೆ ಪರಿಹಾರ ಕೊಡಿ, ಕೂಡಲೇ ಟೋಲ್ ಸ್ಥಗಿತ ಮಾಡುವಂತೆ ಒತ್ತಾಯ.
ಆರಂಭದಲ್ಲಿ ಸಚಿವರು ಶಾಸಕರ ಮನವೊಲಿಸುವ ಕೆಲಸ ಮಾಡಿದರಾದ್ರು ಕೆಳದ ಶಾಸಕಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಕೊನೆಗೂ ಮಣಿದ ಸಚಿವರು ಕೋಡಲೇ ಟೋಲ್ ಗೇಟ್ ತಾತ್ಕಾಲಿಕ ಸ್ಥಗಿತ ಮಾಡುವಂತೆ ಸೂಚಿಸಿದರು.