ಲಿಂಗಸುಗೂರು : ಜಿಟಿ ಜಿಟಿ ಮಳೆ ನಡುವೆ ಬೆಂಕಿಗೆ ಸುಟ್ಟು ಕರಕಲಾಗಿದ ಕಾರು..

K 2 Kannada News
ಲಿಂಗಸುಗೂರು : ಜಿಟಿ ಜಿಟಿ ಮಳೆ ನಡುವೆ ಬೆಂಕಿಗೆ ಸುಟ್ಟು ಕರಕಲಾಗಿದ ಕಾರು..
Oplus_0
WhatsApp Group Join Now
Telegram Group Join Now

K2kannadanews.in

Crime news ಲಿಂಗಸುಗೂರು : ತಾಲೂಕಿನ ಹಟ್ಟಿ ಚಿನ್ನದ (Hutti gold main) ಗಣಿಯ ಮುಖ್ಯ ದ್ವಾರದಲ್ಲಿ (Main entrance) ಸಿಬ್ಬಂದಿಯೊಬ್ಬರ ಕಾರು (Car) ಏಕಾಏಕಿ ಹೊತ್ತಿ ಉರಿದಿದೆ. ಜಿಟಿ ಜಿಟಿ ಮಳೆ ನಡುವೆಯೂ ಏಕಾಏಕಿ ತಗುಲಿದ ಬೆಂಕಿಗೆ ಕಾರು (Cought fire) ಸುಟ್ಟು ಕರಕಲಾಗಿದೆ.

ರಾಯಚೂರು (raichur) ಜಿಲ್ಲೆಯ ‌ಲಿಂಗಸುಗೂರು (Lingasuguru) ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ, ರಾತ್ರಿ ಪಾಳೆಯದ (Night shift) ಸಿಬ್ಬಂದಿ ಅನಿಲ್ ಎಂಬುವವರಿಗೆ ಸೇರಿದ ಕಾರು, ಪಾರ್ಕಿಂಗ್‌ನಲ್ಲಿ (parking) ನಿಲ್ಲಿಸಿದ್ದ ವೇಳೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಸ್ಥಳೀಯರು ಹಾಗೂ ಉಳಿದ ಸಿಬ್ಬಂದಿ ಕೂಡಲೇ ನೀರು (water) ಎರಚಿ ಬೆಂಕಿ ನಂದಿಸಿಲು ಯತ್ನಿಸಿದರಾದರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಕಾರು ಸುಟ್ಟು ಕರಕಲಾಗಿದೆ. ಘಟನೆ ಹಿನ್ನೆಲೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article