ಲಿಂಗಸುಗೂರು : ಖಿನ್ನತೆಗೆ ಒಳಗಾಗಿದ್ದ ತಾಯಿ ಮಗಳು ಆತ್ಮಹತ್ಯೆ..

K 2 Kannada News
ಲಿಂಗಸುಗೂರು : ಖಿನ್ನತೆಗೆ ಒಳಗಾಗಿದ್ದ ತಾಯಿ ಮಗಳು ಆತ್ಮಹತ್ಯೆ..
Oplus_131072
WhatsApp Group Join Now
Telegram Group Join Now

K2kannadanews.in

Suicide News ರಾಯಚೂರು : ದಾಂಪತ್ಯ ಕಲಹ (Family dispute), ವತಿಯಿಂದ ದೂರವಾಗಿದ್ದ ಮಹಿಳೆ ಖಿನ್ನತೆಗೊಳಗಾಗಿ (Depressed) 12 ವರ್ಷದ ತನ್ನ ಮಗಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಸೊಮವಾರ (Monday) ಗುಡದನಾಳ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸೂಗೂರು (Lingasuguru) ತಾಲೂಕಿನ ಗುಡದನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಲಕ್ಷ್ಮೀ(Lakshmi 46), ಅಂಬಿಕಾ(ambika 12) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು. ದಾಂಪತ್ಯ ಕಲಹದಿಂದ 14 ವರ್ಷಗಳ ಹಿಂದೆಯೇ ಪತಿಯಿಂದ ದೂರವಾಗಿದ್ದ ಲಕ್ಷ್ಮೀ. ಗ್ರಾಮದಲ್ಲಿ ಕೆಲಸವಿಲ್ಲದೇ ಮಗಳೊಂದಿಗೆ ಬೆಂಗಳೂರಿಗೆ (Benglore) ಬಂದು ಕೂಲಿ ಕೆಲಸ ಮಾಡಿಕೊಂಡಿದ್ದಳು. ಆದರೆ ಪತಿಯಿಂದ (Hasbend) ದೂರವಾದ ನಂತರ ಖಿನ್ನತೆಗೊಳಗಾಗಿದ್ದಳು.

ಕಳೆದ ಒಂದು ತಿಂಗಳ (month) ಹಿಂದೆಯಷ್ಟೇ ಬೆಂಗಳೂರಿನಿಂದ ಗ್ರಾಮಕ್ಕೆ ಮರಳಿದ್ದ ತಾಯಿ ಮಗಳು. ಇಂದು ಏಕಾಏಕಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಮೃತ ಲಕ್ಷ್ಮೀಯ ಪುತ್ರ ಪಂಪನಗೌಡ ಲಿಂಗಸೂರು ಪೊಲೀಸ್ ಠಾಣೆಗೆ (Lingasuguru police station) ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡಿಸಿದ್ದಾರೆ.

WhatsApp Group Join Now
Telegram Group Join Now
Share This Article