K2kannadanews.in
Murder case ಲಿಂಗಸೂಗೂರು : ಐದಭಾವಿ ಗ್ರಾಮದಲ್ಲಿ ದುರುಗಮ್ಮ ದೇವಿ ಜಾತ್ರೆ (Fare) ಸಂದರ್ಭದಲ್ಲಿ ಕೊಲೆ (Murder) ಮಾಡಿದ್ದ ಪ್ರಕರಣಕ್ಕೆ (case) ಸಂಬಂಧಿಸಿದಂತೆ 18 ಜನ ಆರೋಪಿಗಳಿಗೆ (Accused) ನ್ಯಾಯಾಧೀಶರು ಜೀವಾವಧಿ ಕಾರಾಗೃಹ ಶಿಕ್ಷೆ (Life imprisonment) ಪ್ರಕಟಿಸಿದ್ದಾರೆ.
ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸಗೂರು (Lingasuguru) ತಾಲ್ಲೂಕಿನ ಐದಭಾವಿ ಗ್ರಾಮದಲ್ಲಿ (village) 2010 ಸೆಪ್ಟೆಂಬರ್ 6ರಂದು ದುರುಗಮ್ಮ ದೇವಿ ಜಾತ್ರೆ ವೇಳೆ ಹಳೆ ದ್ವೇಷದಿಂದ (old grudge) ಶರಣಪ್ಪ ಗೋಪಾಲಪ್ಪ ಗೌಡ ಎಂಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ (handguns) ಕೊಲೆ ಮಾಡಿದ್ದರು. ಲಿಂಗಸುಗೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದ ಹಿನ್ನೆಲೆಯಲ್ಲಿ ಅಂದಿನ ಸಿಪಿಐ (CPI) ಪ್ರಭುಗೌಡ ಮಸ್ಕಿ ಮತ್ತು ಸಿಪಿಐ ಜಿ.ಆರ್. ಶಿವಮೂರ್ತಿ ತಂಡ ಪ್ರಕರಣದ ತನಿಖೆ (investigation) ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಗೋಪಾಲರಾವ್ ವಾದ ಮಂಡಿಸಿದ್ದರು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬಿ.ಬಿ.ಜಕಾತಿ ಶುಕ್ರವಾರ ಶಿಕ್ಷೆ ವಿಧಿಸಿದ್ದಾರೆ. ಮೊದಲನೇ ಆರೋಪಿ ಲಕ್ಷ್ಮಣ ಬಸಪ್ಪ ಗುಡದನಾಳ ಸೇರಿ 18 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5,500 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.