This is the title of the web page
This is the title of the web page
National NewsVideo News

ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣ ಕೊಲೆಗಾರರಿಗೆ ಶಿಕ್ಷೆ


K2 ನ್ಯೂಸ್ ಡೆಸ್ಕ್ : ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಕೊಲೆ ಪ್ರಕರಣದ ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, 15 ವರ್ಷಗಳ ನಂತರ ಪತ್ರಕರ್ತೆ ಸೌಮ್ಯ ಕುಟುಂಬದವರಿಗೆ ನ್ಯಾಯ ಲಭಿಸಿದಂತಾಗಿದೆ.

ಹೌದು 2008 ಸೆಪ್ಟೆಂಬರ್ 30ರಂದು ಹೆಡ್ ಲೈನ್ಸ್ ಟುಡೇ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಕಚೇರಿಯಿಂದ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿಗಳು ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದರು.ಪತ್ರಕರ್ತೆ ಶವ ಕಾರಿನಲ್ಲಿ ಪತ್ತೆಯಾಗಿತ್ತು. ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್, ಬಲ್ಜೀತ್ ಮಲಿಕ್ ಮತ್ತು ಅಜಯ್ ಸೇತಿ ಎಂಬುವವರಿಗೆ ಸಾಕೇತ್ ನ್ಯಾಯಾಲಯ ಶಿಕ್ಷೆ ವಿಧಿಸಲಾಗಿದೆ. ನಾಲ್ವರಿಗೆ ಕೊಲೆ ಮಾಡಿದ್ದಕ್ಕಾಗಿ ಹಾಗೂ ಒಬ್ಬನಿಗೆ ಕೊಲೆಗೆ ಸಹಕರಿಸಿದ್ದಕ್ಕಾಗಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಈ ತೀರ್ಪು ಐತಿಹಾಸಿಕವಾದದ್ದು, ತನ್ನ ಮಗಳು ಮೃತಪಟ್ಟಿದ್ದಾಳೆ. ಆಕೆಗೆ ಆದಂತಹ ಅನಾಹುತ ಬೇರೆಯವರಿಗೆ ಆಗದಿರಲಿ ಒಂದು ವೇಳೆ ಈ ರೀತಿ ಶಿಕ್ಷೆ ಆಗದಿದ್ದರೆ ಆರೋಪಿಗಳಿಗೆ ಬೆಂಬಲ ಸೂಚಿಸುವಂತೆ ಆಗುತ್ತಿತ್ತು. ಇದರಿಂದ ಕೊಲೆಗಾರರ ಒಂದು ಗುಂಪನ್ನು ನಿರ್ನಾಮ ಮಾಡಿದಂತಾಗಿದೆ ಎಂದು ಸೌಮ್ಯ ವಿಶ್ವನಾಥನ್ ತಾಯಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


[ays_poll id=3]