YTPS ಕಾರ್ಮಿಕರಿಂದ ಮೂಲಭೂತ ಸೌಲಭ್ಯಕ್ಕೆ ಅನಿರ್ದಿಷ್ಟಾವಧಿ ಹೋರಾಟ..

K 2 Kannada News
YTPS ಕಾರ್ಮಿಕರಿಂದ ಮೂಲಭೂತ ಸೌಲಭ್ಯಕ್ಕೆ ಅನಿರ್ದಿಷ್ಟಾವಧಿ ಹೋರಾಟ..
WhatsApp Group Join Now
Telegram Group Join Now

K2kannadanews.in

Worker’s Protest ರಾಯಚೂರು : ಕಾರ್ಮಿಕರಿಗೆ ನಿಯಮ ಬದ್ಧವಾಗಿ ಕೊಡಬೇಕಾದ ಎಲ್ಲಾ ಸೌಲಭ್ಯಗಳನ್ನು ನಮಗೆ ಸರಿಯಾದ ರೀತಿಯಲ್ಲಿ ಕೊಡುತ್ತಿಲ್ಲ ಎಂದು ಪವರ್‌ಮೆಕ್ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಆರ್‌ಪಿಸಿಎಲ್/ವೈಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದಿಂದ ಕಾರ್ಮಿಕರು ಪ್ರತಿಭಟನೆ ಮಾಡುತ್ತಿದ್ದಾರೆ.

ರಾಯಚೂರು ನಗರದ ಹೊರ ವಲಯದ YTPS ಕೇಂದ್ರದಲ್ಲಿ ಕಾರ್ಮಿಕರು ಪ್ರತಿಭಟನೆ ಮಾಡುತ್ತಿದ್ದಾರೆ. ಗುತ್ತಿಗೆ ಕಾರ್ಮಿಕಾರಗಿ ಸುಮಾರು 5 ವರ್ಷಗಳಿಂದ ವೈಟಿಪಿಎಸ್ ಕೇಂದ್ರದಲ್ಲಿ‌ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಪವರ್‌ಮೆಕ್ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿ ಕಾರ್ಮಿಕರಿಗೆ ನಿಯಮ ಬದ್ಧವಾಗಿ ಕೊಡಬೇಕಾದ ಸೌಲಭ್ಯಗಳನ್ನು ಕೊಡುತ್ತಿಲ್ಲ ಅಸಮಧಾನ ವ್ಯಕ್ತಪಡಿಸಿ ಕೇಂದ್ರದ ಒಳಗೆ ಪ್ರತಿಭಟನೆ ಮಾಡಿದರು.

ಕಾರ್ಮಿಕರಿಗೆ ವಾರ್ಷಿಕ ಇಂಕ್ರಿಮೆಂಟ್, 21 ವಾರದ ರಜೆಯಲ್ಲಿ ಸಂಭಳ ನೀಡುತ್ತಿಲ್ಲ, ಲೀವ್ ಎನ್- ಕ್ಯಾಶಮೆಂಟ್, ಹಿರಿಯ ಕಾರ್ಮಿಕರಿಗೆ ಅವರ ವಿದ್ಯಾಬ್ಯಾಸಕ್ಕೆ ತಕ್ಕಂತೆ ಸಂಬಳ ನೀಡುತ್ತಿಲ್ಲ, ಹೊರ ರಾಜ್ಯದಿಂದ ಬಂದಿರುವ ಕಾರ್ಮಿಕರಿಗೆ ಹೆಚ್ಚಿನ ಸಂಭಳ ನೀಡುತ್ತಿದ್ದು, ಸ್ಥಳಿಯ ನುರಿತ ಕಾರ್ಮಿಕರಿಗೆ ಕಡಿಮೆ ಸಂಬಳ ನೀಡುತ್ತಿರುವುದನ್ನು ಸರಿಪಡಿಸಬೇಕು ಜೊತೆಗೆ, ದೂಳು ಭತ್ಯೆ, ಶಿಫ್ಟ್ ಅಲೊವೆನ್ಸ್, ಶಕ್ತಿನಗರ ಕಾಲೋನಿಯಲ್ಲಿ ನಿಗಮದ ವಸತಿಗಳು ಖಾಲಿ ಇರುವುದರಿಂದ ಗುತ್ತಿಗೆ ಕಾರ್ಮಿಕರಿಗೆ ನೀಡಬೇಕು ಎಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಹಾರಾಟಕ್ಕೆ ಮುಂದಾಗಿದ್ದಾರೆ.

WhatsApp Group Join Now
Telegram Group Join Now
Share This Article