K2kannadanews.in
Cricket new rules ಕ್ರಿಕೇಟ್ : ಇತ್ತೀಚಿಗೆ ಕ್ರಿಕೆಟ್ ಅಂದರೆ ಸಿಕ್ಸ್ ಫೋರ್ ಗಳ ಸುರಿಮಳೆ ಎಂಬಂತಾಗಿದೆ. ಅದರಲ್ಲೂ ಐಪಿಎಲ್ (IPL) ಮತ್ತು T20 ಮಾದರಿ ಕ್ರಿಕೆಟ್ ಬಂದಾಗಿನಿಂದ ಕ್ರಿಕೆಟ್ (Cricket) ಪ್ರತಿ ಪಂದ್ಯದಲ್ಲಿಯೂ ಫೋರ್ (four), ಸಿಕ್ಸ್‌ಗಳ (six) ಸುರಿಮಳೆ ಸಾಮಾನ್ಯವಾಗಿ ಬಿಟ್ಟಿದೆ.ಇದಕ್ಕಾಗಿಯೇ ಜನರು ಸಿಕ್ಸ್-ಬೌಂಡರಿಗಳ ನಿರೀಕ್ಷೆಯಲ್ಲಿಯೇ ಇರುತ್ತಾರೆ.
ಆದರೆ ಇದೀಗ ಕ್ರಿಕೆಟ್‌ನಲ್ಲಿ ಸಿಕ್ಸ್ (Six) ಸಿಡಿಸಿದರೆ ಔಟ್ (out) ಎಂಬ ನಿಯಮಜಾರಿಗೆ ಬಂದಿದೆ. ಅರೇ ಇದೇನು ಸಿಕ್ಸ್ ಹೊಡೆದ್ರೆ ಔಟ್ ಆಗ್ತಾರಾ ಎಂದು ಪ್ರಶ್ನಿಸಿದೆರೆ ಅದಕ್ಕೆ ಉತ್ತರ ಹೌದು ಎನ್ನಬೇಕಷ್ಟೆ ಇದಕ್ಕೆ ಕಾರಣವೂ ಇದೆ. ಈ ಸಿಕ್ಸ್ ಸಿಡಿಸಿದರೆ ಔಟ್ ಎಂಬ ನಿಯಮ ಸಂಪೂರ್ಣ ಕ್ರಿಕೆಟ್‌ಗೆ ಅನ್ವಯಿಸಿ ಜಾರಿಗೆ ತರಲಾಗಿಲ್ಲ. ಇಂಗ್ಲೆಂಡ್‌ನ ಸೌತ್‌ವಿಕ್ ಮತ್ತು ಶೋರ್‌ಹ್ಯಾಮ್ ಕ್ರಿಕೆಟ್ ಕ್ಲಬ್ ಪಂದ್ಯದ ವೇಳೆ ಸಿಕ್ಸ್ ಸಿಡಿಸಿದ ಬಾಲ್‌ಗಳು ಮೈದಾನದ ಅಕ್ಕಪಕ್ಕದಲ್ಲಿ ಇದ್ದ ನಿವಾಸಿಗಳಿಗೆ ಸಮಸ್ಯೆ ಆಗುತ್ತಿದೆಯಂತೆ.
ಕಾರಣ ಎಂದರೆ ಸಿಕ್ಸ್ ಸಿಡಸಿದ ಚೆಂಡು ನೇರವಾಗಿ ಅಕ್ಕಪಕ್ಕದ ನಿವಾಸಿಗಳ ಮನೆಗಳ ಮೇಲೆ ಬಿದ್ದಿದ್ದು, ಮನೆಗಳ ಗ್ಲಾಸ್‌ಗಳು, ಕಿಟಕಿಗಳು ಒಡೆದಿದೆ. ಅಲ್ಲದೇ ಪ್ಲೇಕ್ಷರಿಗೂ ಸಹ ಇದರಿಂದಾಗಿ ಗಾಯಗಳಾಗಿದೆ. ಇದರಿಂದಾಗಿ ಸಿಕ್ಸ್ ಹೊಡಯುವುದನ್ನು ನಿಷೇದಿಸಿದೆ ಎಂದು ಹೇಳಾಗಿದೆ. ಇದರಿಂದಾಗಿ ಸೌತ್‌ವಿಕ್ ಮತ್ತು ಶೋರ್‌ಹ್ಯಾಮ್ ಕ್ರಿಕೆಟ್ ಕ್ಲಬ್‌ನಲ್ಲಿ ಸಿಕ್ಸ್ ಸಿಡಿಸುವುದನ್ನು ನಿಷೇಧಿಸಲಾಗಿದೆ.