K2kannadanews.in
Phone pay ಆನ್ ಲೈನ್ ಮೋಸ : ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಗೆ ಒತ್ತು ಕೊಟ್ಟಿರುವ ಭಾರತದಲ್ಲಿ, ಅದೇ ಡಿಜಿಟಲ್ ಪೇಮೆಂಟ್ ನಲ್ಲಿ ಗ್ರಾಹಕರಿಗೆ ಹೇಗೆ ಮೋಸ ಮಾಡಲಾಗುತ್ತಿದೆ ಎಂಬ, ಒಂದು ಸವಿಸ್ತಾರವಾದ ವಿಡಿಯೋ ಇದೀಗ ವೈರಲ್ ಆಗಿದೆ. ಫೋನ್ ಪೇ, ಗೂಗಲ್ ಪೇ ಸೇರಿ ಆನ್ಲೈನ್ ಪೇಮೆಂಟ್ ಮಾಡುವ ಗ್ರಾಹಕರು ಇದನ್ನ ಒಮ್ಮೆ ಎಚ್ಚರದಿಂದ ನೋಡಿ ಎಚ್ಚೆತ್ತುಕೊಳ್ಳಬೇಕಿದೆ.
ಹೌದು ಎಕ್ಸ್ ಖಾತೆಯಲ್ಲಿ ಇಂತಹದೊಂದು ವಿಡಿಯೋ ವೈರಲ್ ಆಗಿದೆ. ಘರ್ ಕೆ ಕಾಲೇಶ ಎಂಬ ಖಾತೆಯಿಂದ, ಯುಪಿಐ ಪಿನ್ ಹಾಕುವಂತೆ ಕೇಳುವ ವಂಚಕನ ಮಾಡಿರುವ ವೀಡಿಯೋ X ನಲ್ಲಿ ಹಾಕಿದ್ದಾರೆ. ವಿಡಿಯೋ ನೋಡಿ ಗ್ರಾಹಕರು ಮೋಸ ಹೋಗದಂತೆ ಮನವಿ ಮಾಡಿದ್ದಾರೆ. ಖಾತೆ ಪರಿಶೀಲನೆಗೆ 8,999 ರೂಪಾಯಿ ಯುಪಿಐ ಮಾಡುವಂತೆ ವಂಚಕ ಹೇಳ್ತಾನೆ. ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಹಣವನ್ನು ವಾಪಸ್ ಮಾಡುವುದಾಗಿ ಆತ ಹೇಳ್ತಾನೆ. ವಂಚಕ ಹೇಳಿದಂತೆ ವ್ಯಕ್ತಿ, ಯುಪಿಐ ಪಿನ್ ನಮೂದಿಸುವ ಪೇಜ್ ಗೆ ಹೋಗ್ತಾನೆ. ಆದ್ರೆ ಅಲ್ಲಿ ಅದು ಸ್ಕ್ಯಾಮ್ ಎಂಬ ಅನುಮಾನ ಬರುತ್ತದೆ.
ಹಾಗಾಗಿ ಎಚ್ಚೆತ್ತು ಯುಪಿಐ ಪಿನ್ ಯಾಕೆ ಹಾಕ್ಬೇಕು ಎಂದು ಗ್ರಾಹಕ ಕೇಳ್ತಾನೆ. ಅಲ್ಲದೆ 15 ನಂಬರ್ ಏಕಿದೆ ಎಂದು ಪ್ರಶ್ನೆ ಮಾಡ್ತಾನೆ. ಅದಕ್ಕೆ ವಂಚಕ ಹಾರಿಕೆ ಉತ್ತರ ನೀಡಲು ಶುರು ಮಾಡ್ತಾನೆ. ನಂತ್ರ ಗ್ರಾಹಕ ವಿಡಿಯೋ ರೆಕಾರ್ಡ್ ಆಗ್ತಿದೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುತ್ತೇನೆ ಎಂದಾಗ ಕೋಪಗೊಳ್ಳುವ ವಂಚಕ ಬೆದರಿಕೆ ಶುರು ಮಾಡ್ತಾನೆ. ಆಗಸ್ಟ್ 6 ರಂದು ಚಿತ್ರೀಕರಿಸಲಾದ ವೀಡಿಯೊವು ಸುಮಾರು ಐದು ಲಕ್ಷ ವೀಕ್ಷಣೆ ಪಡೆದಿದೆ. 6,400 ಕ್ಕೂ ಹೆಚ್ಚು ಲೈಕ್ ಬಂದಿದೆ. ಇಲ್ಲಿ ವಂಚನೆಗೊಳಗಾದ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.