K2kannadanews.in
highway project ರಾಯಚೂರು : ಚುನಾವಣೆ (Election) ಪೂರ್ವದಲ್ಲಿ ಮತದಾರರ (voters) ವಿಶ್ವಾಸ ಗಳಿಸಲು ಘೋಷಣೆಯಾದ ಹೆದ್ದಾರಿ (highway) ಯೋಜನೆಗೆ ಗ್ರಹಣ ಹಿಡಿದಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ರಾಜ್ಯದಲ್ಲಿ (State) 12,863 ಕೋಟಿ ಮೊತ್ತದ 12 ಕಾಮಗಾರಿಗಳಿಗೆ ತಾಂತ್ರಿಕ (Technical) ದೋಷ ಜಾಗದ (land) ಲಭ್ಯತೆಯೇ ಇಲ್ಲ.
ಇನ್ನೂ ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಮುಖ್ಯವಾಗಿ ಬೆಳಗಾವಿ (Belgavi) – ಹುನಗುಂದ (hunugund) – ರಾಯಚೂರು (Raichur) ನಡುವೆ ರಾಷ್ಟ್ರೀಯ ಹೆದ್ದಾರಿ 748ಎ ಘೋಷಣೆ ಮಾಡಲಾಗಿತ್ತು. ಆರು ಪ್ಯಾಕೇಜ್ ಗಳಲ್ಲಿ ಹೆದ್ದಾರಿ ವಿಸ್ತರಣೆ ಮಾಡಲು ಯೋಜಿಸಲಾಗಿದೆ. ಚುನಾವಣೆಯ ಪೂರ್ವದಲ್ಲಿ ಘೋಷಣೆಯಾದ ಯೋಜನೆಯಿದು. ಹೆದ್ದಾರಿ ವಿಸ್ತರಣೆಗೆ ಭೂಸ್ವಾಧೀನ ಮಾಡಬೇಕಿದೆ. ಆದರೆ, ಈ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ಈ ಯೋಜನೆಗೆ ಚಾಲನೆ ಸಿಕ್ಕಿಲ್ಲ ಎಂದು ಪ್ರಾಧಿಕಾರ ಹೇಳಿಕೊಂಡಿದೆ.
ಬೆಳಗಾವಿ-ಹುನಗುಂದ-ರಾಯಚೂರು ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ 748ಎ) ಯೋಜನೆಯ ಉದ್ದ (ಕಿ.ಮೀ) ಮತ್ತು ಮೊತ್ತ(ಕೋಟಿ)ಗಳಲ್ಲಿ ನೋಡುವುದಾದರೇ, ಪ್ಯಾಕೇಜ್ 1: 43.8 ಕಿಲೋಮೀಟರ್ ಗೆ 1,452 ಕೋಟಿ, ಪ್ಯಾಕೇಜ್ 2 : 46 ಕಿಲೋಮೀಟರ್, 1,427 ಕೋಟಿ, ಪ್ಯಾಕೇಜ್ 3: 46 ಕಿಲೋಮೀಟರ್, 1,363 ಕೋಟಿ, ಪ್ಯಾಕೇಜ್ 4: 46 ಕಿಲೋಮೀಟರ್, 1,311 ಕೋಟಿ, ಪ್ಯಾಕೇಜ್ 5 : 46 ಕಿಲೋಮೀಟರ್, 1,142 ಕೋಟಿ, ಪ್ಯಾಕೇಜ್ 6 : 44 ಕಿಲೋಮೀಟರ್ 1,246 ಕೋಟಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೋಪೀಸಲಾಗಿದೆ.