
K2 ಕ್ರೈಂ ನ್ಯೂಸ್ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರಾತ್ರಿ ಮಲಗಿದ್ದ ವೇಳೆ ಸ್ವಂತ ಅಣ್ಣನೇ ತಮ್ಮನನ್ನು ಕತ್ತಿಗೆ ಕೊಯ್ದು ಕೊಲೆ ಮಾಡಿರುವ ಭಯಾನಕ ಘಟನೆ ಗಂಗಾವತಿಯಲ್ಲಿ ನಡೆದಿದೆ.
ಹೌದು ಕೊಪ್ಪಳ ಜಿಲ್ಲೆಯ ಗಂಗಾವತಿಯ ಹೆಚ್.ಆರ್.ಎಸ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಮೌಲಾ ಹುಸೇನ್ ಮೃತ ದುರ್ದೈವಿ. ನೂರ್ ಅಹಮದ್ ತಮ್ಮನನ್ನೇ ಕೊಲೆಗೈದ ಆರೋಪಿ. ಮೌಲಾ ಹುಸೇನ್ನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ನೂರ್ ಅಹಮ್ಮದ್ ಸರಿ ಇಲ್ಲ ಎಂದು ಮೌಲಾ ಹುಸೇನ್ ಹೇಳಿದ್ದೇ ಕೊಲೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಗಂಡ ಸರಿಯಿಲ್ಲ ಎಂಬ ಮಾತನ್ನು ನಂಬಿ ನೂರ್ ಅಹಮ್ಮದ್ ಪತ್ನಿ ತನಗೆ ಡೈವರ್ಸ್ ನೀಡು ಎಂದು ಹೇಳಿದ್ದಳು.

ಇದರಿಂದ ಗಂಡ ಹಾಗೂ ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಪತಿ ಹಾಗೂ ಪತ್ನಿಯರ ಜಗಳ ಸಹೋದರ ಮೌಲಾ ಹುಸೇನ್ ಕೊಲೆಯಲ್ಲಿ ಅಂತ್ಯವಾಗಿದೆ.
![]() |
![]() |
![]() |
![]() |
![]() |
[ays_poll id=3]