K2kannadanews.in
stole money ಲಿಂಗಸುಗೂರು : ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿಗೆ ಬೆದರಿಸಿ ಚಿನ್ನಾಭರಣ, ನಗದು ಹಣ ಸುಲಿಗೆಕೋರರು ದೋಚಿದ ಘಟನೆ ಲಿಂಗಸುಗೂರು ಪಟ್ಟಣದಲ್ಲಿ ಜರುಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ಪುಟ್ಟಣದ ಬಸವಸಾಗರ ರಸ್ತೆಯಲ್ಲಿ ಇರುವ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಘಟನೆ ಜರುಗಿದೆ. ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿಗೆ ಬೆದರಿಸಿ ಚಿನ್ನಾಭರಣ, ನಗದು ಹಣ ದೋಚಿ ಸುಲಿಗೆಕೋರರು ಪರಾರಿಯಾಗಿದ್ದಾರೆ. ಮಠದಲ್ಲಿನ 20 ಲಕ್ಷ ನಗದು ಹಣ, 80 ಗ್ರಾಂ ಚಿನ್ನಾಭರಣ, 7 ಕೆ.ಜಿ ಬೆಳ್ಳಿ ವಸ್ತುಗಳ ಸುಲಿಗೆ ಮಾಡಿದ್ದಾರೆ. ಸುಮಾರು 35 ಲಕ್ಷ ರೂ ಮೌಲ್ಯದ ವಸ್ತುಗಳನ್ನ ದೋಚಿರುವ ಸುಲಿಗೆಕೋರರು ರಾತ್ರಿ ಮಠದಲ್ಲಿ ಮಲಗಲು ಆಶ್ರಯ ಕೇಳಿಕೊಂಡು ಬಂದಿದ್ದ ಇಬ್ಬರು ಆಗುಂತಕರೇ ಕೃತ್ಯ ಎಸಗಿದ್ದಾರೆ.
ಕಲಬುರ್ಗಿಯಿಂದ ಬಂದಿದ್ದೇವೆ ರಾತ್ರಿ ಇಲ್ಲಿ ತಂಗಿದ್ದು ಬೆಳಗ್ಗೆ ಹೊರಡುತ್ತೇವೆ ಎಂದು ಮಠದಲ್ಲಿ ಆಶ್ರಯ ಪಡೆದಿದ್ದರು, ತದನಂತರ ನೀರು ಕೇಳುವ ನೆಪದಲ್ಲಿ ಮಧ್ಯಾರಾತ್ರಿ ಸ್ವಾಮಿಜಿ ಕೋಣೆ ಬಾಗಿಲು ತೆಗೆಯಿಸಿ, ಗನ್ ರೀತಿಯ ಆಯುಧ ಹಿಡಿದು ಬೆದರಿಸಿ ಸುಲಿಗೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಶಿವಕುಮಾರ್ ಭೇಟಿ ಪರಿಶೀಲನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಲಿಂಗಸುಗೂರಿನಲ್ಲಿ ದರೋಡೆಕೋರರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಘಟನೆ ನಡೆದಿತ್ತು.