ಲಿಂಗಸಗೂರು NERTC ಮ್ಯಾನೇಜರ್ ಕಿರುಕುಳ ಆರೋಪ ವಿಷ ಸೇವಿಸಿದ ಚಾಲಕ..

K 2 Kannada News
ಲಿಂಗಸಗೂರು NERTC ಮ್ಯಾನೇಜರ್ ಕಿರುಕುಳ ಆರೋಪ ವಿಷ ಸೇವಿಸಿದ ಚಾಲಕ..
Oplus_16908288
WhatsApp Group Join Now
Telegram Group Join Now

K2Kannadanews.in

Crime news ಲಿಂಗಸೂಗೂರು : ಡಬಲ್ ಡ್ಯೂಟಿ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಕೆಆರ್‌ಟಿಸಿ ಘಟಕ ವ್ಯವಸ್ಥಾಪಕ ಚಾಲಕನಿಗೆ ಕಿರುಕುಳ ಕೊಟ್ಟ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಜೆ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಇರುವಂತಹ ಕೆಕೆಆರ್‌ಟಿಸಿ ಘಟಕದಲ್ಲಿ ಚಾಲಕನಾಗಿ ಅಬ್ದುಲ್ ಶಿರೂರು ಕರ್ತವ್ಯ ಸಲ್ಲಿಸುತ್ತಿದ್ದ. ಈ ವೇಳೆ ಹೈದರಾಬಾದ್ ಮಾರ್ಗಕ್ಕೆ ಡ್ಯೂಟಿ ಮಾಡುವ ಅಬ್ದುಲ್ ಶಿರೂರು ಅವರನ್ನು ಘಟಕದ ವ್ಯವಸ್ಥಾಪಕ ರಾಹುಲ್ ಹೊನಸೂರೆ ಅವರು ಬೇರೆ ಮಾರ್ಗದ ಡ್ಯೂಟಿ ಮಾಡುವಂತೆ ಹೇಳಿದ್ದಾರೆ. ಈಗಾಗಲೇ ನಾನು ಡ್ಯೂಟಿ ಮುಗಿಸಿದ್ದೇನೆ ಮತ್ತೆ ಬೇರೆ ಮಾರ್ಗಕ್ಕೆ ಡ್ಯೂಟಿ ಮಾಡಲು ಆಗುವುದಿಲ್ಲ ಎಂಬ ವಿಚಾರಕ್ಕೆ, ಘಟಕದ ಗೇಟಿನಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ವ್ಯವಸ್ಥಾಪಕರ ಕಚೇರಿಯಲ್ಲೂ ಗಲಾಟೆ ನಡೆದಿದೆ. ವ್ಯವಸ್ಥಾಪಕರು ಒಪ್ಪದ ಹಿನ್ನೆಲೆಯಲ್ಲಿ ಮನನೊಂದು ಚಾಲಕ ಹೊರ ಬಂದು ಕ್ರಿಮಿನಾಶಕ ಸೇವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದೆ ಒಂದೇ ಮಾರ್ಗದ ಡ್ಯೂಟಿ ಮಾಡಲು ಘಟಕ ವ್ಯವಸ್ಥಾಪಕರೇ ಪರವಾನಗಿ ನೀಡಿದ್ದರು. ಅದರಂತೆ ನಾನು ಹೈದರಾಬಾದ್‌ ಮಾರ್ಗದ ಡ್ಯೂಟಿ ಆಯ್ಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಡ್ಯೂಟಿ ಸಂದರ್ಭದಲ್ಲಿ ಡೇ ಡ್ಯೂಟಿ ಸೇರಿದಂತೆ ಹಲವು ರೀತಿಯಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಹೀಗಿದ್ದರೂ ಇಷ್ಟು ದಿನ ಸಹಿಸಿಕೊಂಡಿದ್ದೆ. ನಿನ್ನೆ ಎಂದಿನಂತೆ ಕೆಲಸಕ್ಕೆ ಹೋದ ವೇಳೆ, ವ್ಯವಸ್ಥಾಪಕರು ರಾತ್ರಿ ಹೈದರಾಬಾದ್‌ಗೆ ಹೋಗಿ ಬೆಳಿಗ್ಗೆ ವಾಪಸ್‌ ಬರುವಂತೆ ಹೇಳಿದರು. ವಿಶ್ರಾಂತಿ ಇಲ್ಲದೇ ಡ್ಯೂಟಿ ಮಾಡಲು ನನ್ನಿಂದ ಆಗಲ್ಲ ಎಂದಾಗ ಅಮಾನತು ಮಾಡುವುದಾಗಿ ಬೆದರಿಸಿದರು. ಇದರಿಂದ ನೊಂದು ಕ್ರಿಮಿನಾಶಕ ಸೇವಿಸಿದ್ದೇನೆ ಎನ್ನುತ್ತಾರೆ ಬಾಲಕ ಅಬ್ದುಲ್. ಇನ್ನೂ ಘಟಕದ ವ್ಯವಸ್ಥಾಪಕರ ಕಿರುಕುಳದಿಂದ ಬೇಸತ್ತು ಕೆಲ ದಿನಗಳ ಹಿಂದೆ ಚಾಲಕ ಮಹ್ಮದ್ ರಫಿ ಎಂಬುವರು ಕುಟಂಬ ಸಮೇತ ಬಂದು ಘಟಕದ ಎದುರು ವಿಷ ಕುಡಿಯಲು ಯತ್ನಿಸಿದ್ದರು.

ವ್ಯವಸ್ಥಾಪಕರ ಕಚೇರಿಯಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅಲ್ಲೇ ಕೂಡ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿರುವ ಘಟಕದ ವ್ಯವಸ್ಥಾಪಕ ರಾಹುಲ್ ಹೊನಸೂರೆ, ನಾನು ಕಿರುಕುಳ ನೀಡಿಲ್ಲ. ಹೈದರಬಾದ್ ಡ್ಯೂಟಿ ಹೋಗು ಎಂದಾಗ ಚಾಲಕ ಅಬ್ದುಲ್ ನನ್ನ ಚೇಂಬರ್‌ಗೆ ನುಗ್ಗಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ನನ್ನ ಕೈ ಹಾಗೂ ಕಿವಿಗೆ ಪೆಟ್ಟಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಇಲಾಖೆ ಈ ಒಂದು ಘಟನೆ ಬಗ್ಗೆ ಯವನ ರೀತಿಯ ತನಿಖೆ ಕೈಗೊಂಡು ವ್ಯವಸ್ಥಾಪಕರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ.

WhatsApp Group Join Now
Telegram Group Join Now
Share This Article