K2kannadanews.in
Political News ದೇವದುರ್ಗ : ರಾಜ್ಯ ಸರಕಾರ ಜಡಿಎಸ್ ಶಾಸಕರನ್ನು ನಿರ್ಲಕ್ಷ್ಯ ಮಾಡುತ್ತಿದ್ದು, ಅನುದಾನ ನೀಡುತ್ತಿಲ್ಲ, ಜೊತೆಗೆ ಅವೈಜ್ಞಾನಿಕ ಟೋಲ್ ಗೇಟ್ ಅಳವಡಿಸುವ ನಿರ್ಮಿಸುವ ಮೂಲಕ ಕ್ಷೇತ್ರದಲ್ಲಿ ನನ್ನ ಹೆಸರು ಹಾಳು ಮಾಡುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿ ಕೂಡಲೇ ಟೋಲ್ ತೆಗೆಯಬೇಕು ಎಂದು ಆಗ್ರಹಿಸಿ ಅಹೋರಾತ್ರಿ ಧರಣ ಮಾಡುತ್ತಿದ್ದಾರೆ ಕ್ಷೇತ್ರದ ಶಾಸಕಿ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಾಕರಗಲ್ ಬಳಿ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿರುವ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ನಡುರಸ್ತೆಯಲ್ಲಿ ತಮ್ಮ ಹೋರಾಟ ಮುಂದುವರೆಸಿದ್ದಾರೆ. ರಾತ್ರಿ ಟೋಲ್ ಗೇಟ್ ನಲ್ಲೇ ಮಲಗಿ ಪ್ರತಿಭಟನೆ ಮಾಡಿದ್ದಾರೆ.
ಅವೈಜ್ಞಾನಿಕವಾಗಿ 40 ಕಿ.ಮೀ ಅಂತರದೊಳಗೆ ಎರಡು ಟೋಲ್ ಗೇಟ್ ಅಳವಡಿಕೆ ಮಾಡಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರಿನಲ್ಲಿ ನಿನ್ನೆ ನಡೆದ ಕೆಡಿಪಿ ಸಭೆಯಲ್ಲೂ ಪ್ರತಿಭಟನೆ ಮಾಡಿದ್ದ ಶಾಸಕಿ ಟೋಲ್ ಗೇಟ್ ರದ್ದುಪಡಿಸುವಂತೆ ಆಗ್ರಹಿಸಿ ಸಭೆಯಲ್ಲಿ ಧರಣಿ ಕುಳಿತಿದ್ದರು. ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಭರವಸೆ ನೀಡಿದ್ದರು. ಆದ್ರೆ ಟೋಲ್ ಗೇಟ್ ಚಾಲನೆಯಲ್ಲಿರುವುದರಿಂದ ರೊಚ್ಚಿಗೆದ್ದ ಶಾಸಕಿ ಹೋರಾಟ ಮುಂದುವರೆಸಿದ್ದಾರೆ.