K2kannadanews.in
Political News news desk : ಕಾಂಗ್ರೆಸ್ ಸರ್ಕಾರ (Congrees government) ಅಧಿಕಾರಕ್ಕೆ ಬಂದ ನಂತರ ನೀಡಿರುವ, ಗ್ಯಾರಂಟಿ ಯೋಜನೆಗಳು (Guarantee scheme) ಲೋಕಸಭಾ ಚುನಾವಣೆಯಲ್ಲಿ (MP election) ಕೈ ಹಿಡಿದಿಲ್ಲ ಎಂಬ ಮಾತನ್ನು ಮುಂದಿಟ್ಟುಕೊಂಡು, ಆಡಳಿತ ಪಕ್ಷದ ಕೆಲ ಶಾಸಕರು (MLA), ಮುಖಂಡರು ಗ್ಯಾರೆಂಟಿ ಯೋಜನೆ ತೆಗಿತಗೊಳಿಸಲು (Stop) ಒತ್ತಾಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು ಕಾಂಗ್ರೆಸ್ ಗ್ಯಾರಂಟಿ ಯೋಜನೆ ಟೀಕಿಸಿದ ಬಿಜೆಪಿ (BJP) ಪರವಾಗಿ ಜನ ಮತ (Vote) ಹಾಕಿದ್ದಾರೆ. ಹೀಗಾಗಿ, ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು ಎಂದು ಕೆಪಿಸಿಸಿ (KPCC) ವಕ್ತಾರ ಎಂ. ಲಕ್ಷ್ಮಣ, ಸೇರಿಕೆಲ ಶಾಸಕರು ಮತ್ತು ಮುಖಂಡರು ಹೇಳಿದ್ದಾರೆ. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟವಾಗಿಲ್ಲ ಎಂಬುದನ್ನು ಫಲಿತಾಂಶದ (Result) ಮೂಲಕ ತೋರಿಸಿದ್ದಾರೆ. ಜನರಿಗೆ ನಮ್ಮ ಗ್ಯಾರಂಟಿ ಇಷ್ಟವಾಗಿಲ್ಲ. ಹೀಗಾಗಿ, ಗ್ಯಾರಂಟಿ ಯೋಜನೆ ಬಗ್ಗೆ ಮುಖ್ಯಮಂತ್ರಿ (CM) ಸಿದ್ದರಾಮಯ್ಯ (Siddaramayya) ಮರುಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಗ್ಯಾರಂಟಿ ವಿರುದ್ಧ ಮಾತನಾಡುತ್ತಿದ್ದ ಬಿಜೆಪಿಯವರನ್ನು ಜನ ಬೆಂಬಲಿಸಿದ್ದಾರೆ. ಹಾಗಾಗಿ ಆಡಳಿತ ಪಕ್ಷದ ಶಾಸಕರು, ಮುಖಂಡರು ಕೂಡ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವ ಬಗ್ಗೆ ಒತ್ತಾಯಿಸಿದ್ದಾರೆ. ಆದರೆ, ಸಿಎಂ ಸೇರಿದಂತೆ ಅನೇಕರು ಗ್ಯಾರಂಟಿ ಯೋಜನೆ ಮುಂದುವರೆಸುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.