ದರ್ವೆಶಿ ಕಂಪನಿ ಮಹಾ ಮೋಸ ಆರೋಪ : ಪಂಗನಾಮ ಹಾಕಿತಾ ಕಂಪನಿ..?

K 2 Kannada News
ದರ್ವೆಶಿ ಕಂಪನಿ ಮಹಾ ಮೋಸ ಆರೋಪ : ಪಂಗನಾಮ ಹಾಕಿತಾ ಕಂಪನಿ..?
WhatsApp Group Join Now
Telegram Group Join Now

K2kannadanews.in

Accused of cheating ರಾಯಚೂರು : ಹೆಚ್ಚಿನ ಬಡ್ಡಿ ಆಸೆ ತೋರಿಸಿ ನೂರಾರು ಜನರು ಹಣ ಹೂಡಿಕೆ ಮಾಡುವಂತೆ ಮಾಡಿ ದರ್ವೇಶ ಗ್ರೂಪ್ ಕಂಪನಿಯ ಮಾಲೀಕ ಮಹ್ಮದ್ ಹುಸೇನ್ ಶುಜ ನೂರಾರು ಕೋಟಿ ಲಪಾಟಾಯಿಸಿದ್ದಾರೆ ಅರೋಪಿಸಿ ಅಂಬೇಡ್ಕ‌ರ್ ಸೇನೆ ವತಿಯಿಂದ ದರ್ವೇಶ ಗ್ರೂಪ್ ಕಂಪನಿಯ ಮುಂದೆ ಪ್ರತಿಭಟನೆ ನಡೆಸಿದರು.

ದರ್ವೇಶ ಗ್ರೂಪ್ ಕಂಪನಿಯ ಮಾಲೀಕ ಮಹ್ಮದ್ ಹುಸೇನ್ ಶುಜ ಮೇಲೆ ಸೂಕ್ತ ಕಾನೂನು ಕ್ರಮ ಹಾಗೂ ಪ್ರಕರಣ ದಾಖಲಿಸಿ ಹಣ ಹೂಡಿಕೆ ಮಾಡಿದರವರಿಗೆ ನ್ಯಾಯ ಒದಗಿಸಿಕೊಡಬೇಕು. ಕಾರಣ ಕಂಪನಿಯಲ್ಲಿ ಸಾವಿರಾರು ಬಡ ಕುಟುಂಬದ ಜನರು ಸಾಲ ಮಾಡಿ, ಆಭರಣಗಳು ಮಾರಾಟ ಮಾಡಿ, ಹೆಚ್ಚಿನ ಬಡ್ಡಿ ಆಸೆಗೆ ಹೂಡಿಕೆ ಮಾಡಿದ್ದಾರೆ, ಶೇ 12 ರಿಂದ 15 ರಷ್ಟು ಬಡ್ಡಿ ನೀಡುವುದಾಗಿ ಸಾರ್ವಜನಿಕರಿಗೆ ನಂಬಿಸಿ ಕೋಟ್ಯಾಂತರ ರೂ ಹೂಡಿಕೆ ಮಾಡಿಕೊಂಡು ಇದೀಗ ಕೆಲವರಿಗೆ ಅಲ್ಪ ಪ್ರಮಾಣದಲ್ಲಿ ಹಿಂತಿರುಗಿಸಿ ಹೋಡಿ ಹೋಗಿದ್ದಾನೆ ಎಂದು ದೂರಿದರು. ದರ್ವೇಶ ಗ್ರೂಪ್ ಕಂಪನಿಯಲ್ಲಿ ಏಜೆಂಟ್ ದಾರರು ತಮ್ಮಮ್ಮರಿಗೆ ಮಾತ್ರ ಹಾಗೂ ತೀವ್ರ ಆರೋಗ್ಯ ಸಮಸ್ಯೆ ಇದ್ದವರಿಗೆ ಮಾತ್ರ ಇಂತಿಷ್ಟು ಹಣ ಪಾವತಿಸಿದ್ದಾರೆ, ಇದೀಗ ಏಜೆಂಟ್‌ ರೂ ಕಾಣೆಯಾಗಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ K2 ನ್ಯೂಸ್ ಜೊತೆ ಮಾತನಾಡಿದ ಅಲಂ ಗಬ್ಬೂರು ಅವರು, ಕಂಪನಿಯವರು ಹೆಚ್ಚಿನ ಬಡ್ಡಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಅವರನ್ನು ಮತ್ತು ಅವರ ಮಾತುಗಳನ್ನು ನಂಬಿ ನಮ್ಮ ಕುಟುಂಬದಿಂದ 70ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೆವೆ. ಇದೀಗ ಸಾಕಷ್ಟು ಗೊಂದಲ ಉಂಟಾಗಿದ್ದು, ಮಾಲೀಕರಾದ ಸುಜಾ ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ ಹಣ ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article