ಗ್ರಾಹಕರೇ ಗಮನಿಸಿ ಇಂದಿನಿಂದ ಮೊಬೈಲ್ ರಿಚಾರ್ಜ ದರ ಹೆಚ್ಚಳ..!

K 2 Kannada News
ಗ್ರಾಹಕರೇ ಗಮನಿಸಿ ಇಂದಿನಿಂದ ಮೊಬೈಲ್ ರಿಚಾರ್ಜ ದರ ಹೆಚ್ಚಳ..!
WhatsApp Group Join Now
Telegram Group Join Now

K2kannadanews.in

recharge rate increase ಟೆಲಿಕಾಂ : ಪ್ರಸ್ತುತ ಮೊಬೈಲ್ ಇಂಟರ್ನೆಟ್ ಇಲ್ಲದೆ ಜೀವನ ಇಲ್ಲ ಎಂಬಂತಾಗಿದೆ ಜೀವನ ಶೈಲಿ. ಆರಂಭದಲ್ಲಿ ಕಡಿಮೆ ಬೆಲೆಗೆ ಇಂಟರ್ನೆಟ್ ಡಾಟಾ ನೀಡುತ್ತಿದ್ದ ಕಂಪನಿಗಳು ಇದೀಗ ಬೆಲೆ ಹೆಚ್ಚಳದ ಬಿಸಿ ನೀಡಿದೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ನಂತರ ಇದೀಗ ಮೊಬೈಲ್ ರಿಚಾರ್ಜ್ ಬೆಲೆ ಏರಿಕೆ ತಲೆನೋವು ತಂದಿದೆ.

ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳಾದ ಜಿಯೋ ಮತ್ತ ಏರ್‌ಟೆಲ್‌, ವಿಐ ಸೇರಿ ಬಹುತೇಕ ಕಂಪನಿಗಳು ತಮ್ಮ ಪರಿಷ್ಕೃತ ಮೊಬೈಲ್ ಪ್ಲಾನ್ ದರವನ್ನು ಇಂದಿನಿಂದ (ಜುಲೈ3) ಜಾರಿಗೊಳಿಸುವುದಾಗಿ ಘೋಷಿಸಿದ್ದವು. ರಿಲಯನ್ ಜಿಯೋ ಪೈಪೋಟಿ ಮನೋಭಾವ ಮುಂದುವರಿಸಿದ್ದು, ಭಾರ್ತಿ ಏರ್‌ಟೆಲ್‌ಗಿಂತ ಕಡಿಮೆ ಪ್ಲಾನ್‌ ದರವನ್ನು ನಿಗದಿ ಮಾಡಿದೆ. ಏರ್‌ಟೆಲ್‌ನ ಏರಿಕೆಯು ಶೇಕಡಾ 10-21 ರ ವ್ಯಾಪ್ತಿಯಲ್ಲಿದ್ದರೆ, ಜಿಯೋ ಬೆಲೆಗಳನ್ನು ಶೇಕಡಾ 12-25 ರಷ್ಟು ಹೆಚ್ಚಿಸಿದೆ. ಎರಡೂ ಕಂಪನಿಗಳ ಹೊಸ ಪ್ಲಾನ್ ದರಗಳು ಜುಲೈ 3 ರಿಂದ (ಇಂದಿನಿಂದ) ಅನ್ವಯವಾಗುತ್ತವೆ.

ಆದಾಗ್ಯೂ, ಜಿಯೋದ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20 ಪ್ರತಿಶತದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಪೋಸ್ಟ್‌ ಪೇಯ್ಡ್‌ ಪ್ಲಾನ್‌ ದರದಲ್ಲೂ ಜಿಯೋ ದರ ಶೇಕಡ 29 ರಷ್ಟು ಕಡಿಮೆ ಇದೆ. ಹೊಸ ಪ್ಲಾನ್‌ ದರಗಳನ್ನು ಹೋಲಿಸಿ ನೋಡಿದರೆ, ರಿಲಯನ್ಸ್‌ ಜಿಯೋ ಟೆಲಿಕಾಂನ ಬಹುತೇಕ ಎಲ್ಲ ರೀಚಾರ್ಜ್‌ ಯೋಜನೆಗಳು ಇನ್ನು ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿರುವುದು ಗಮನಸೆಳೆದಿದೆ.

ಅನ್ ಲಿಮಿಟೆಡ್ ಪ್ಲಾನ್‌ ಹೀಗಿವೆ..

ಏರ್‌ಟೆಲ್ : 28 ದಿನಗಳ ಅವಧಿಯ 179 ರೂಪಾಯಿ ಇದ್ದ ಪ್ಲಾನ್ ಈಗ 199 ರೂಪಾಯಿ ಪ್ಲಾನ್ ಆಗಿದೆ. 84 ದಿನಗಳ ಅವಧಿಯ ಪ್ಲಾನ್ 455 ರೂಪಾಯಿಯಿಂದ 509 ರೂಪಾಯಿಗೆ ಏರಿದೆ.ವಾರ್ಷಿಕ ಯೋಜನೆ 1,799 ರೂಪಾಯಿ ಇದ್ದದ್ದು 1,999 ರೂಪಾಯಿ ಆಗಿದೆ.

ಜಿಯೋ : 28 ದಿನಗಳ 2GB ಪ್ಲಾನ್ ಈಗ 155 ರೂಪಾಯಿಂದ 189 ರೂಪಾಯಿಗೆ ಏರಿದೆ. ಮೂರು ತಿಂಗಳ ಅವಧಿಯ 6GB ಪ್ಲಾನ್ 395 ರೂಪಾಯಿಯಂದ 479 ರೂಪಾಯಿಗೆ ಏರಿಕೆಯಾಗಿದೆ. ವಾರ್ಷಿಕ 24GB ಪ್ಲಾನ್ ಈಗ 1,899 ರೂಪಾಯಿಯಿಂದ 1,559 ರೂಪಾಯಿಗೆ ಏರಿದೆ.

WhatsApp Group Join Now
Telegram Group Join Now
Share This Article