
ರಾಯಚೂರು : ಅಪ್ರಾಪ್ತ ಬಾಕಿಯನ್ನು ಪರಿಚಯಸ್ಥ ಹುಡುಗರು ಕೊಲೆ ಮಾಡಿರುವ ಘಟನೆ ರಾಯಚೂರು ತಾಲ್ಲೂಕಿನ ಕೆರೆಬುದೂರು ಗ್ರಾಮದ ಬಳಿ ನಡೆದಿದೆ.
ಹೌದು ಈರಮ್ಮ(15) ಮೃತ ಬಾಲಕಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ರಾಯಚೂರು ತಾಲ್ಲೂಕಿನ ಗಿಲ್ಲೆಸುಗೂರು ಕ್ಯಾಂಪ್ ನಲ್ಲಿ ಆಂದ್ರ ಮೂಲದ ಕುಟುಂಬ. ಪೆದ್ದಣ್ಣ ಹಾಗೂ ಅಣ್ಣ ತಮ್ಮಂದಿರೆಲ್ಲಾ ವಾಸವಾಗಿದ್ದರು. ಸಂಬಂಧಿಕರ ಮಕ್ಕಳಾಗಬೇಕಿದ್ದ ಶಿವಲಿಂಗ (20), ಶಿವು(21), ವಿರೇಶ್ (22) ಇವರು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಮೃತ ಈರಮ್ಮಳನ್ನ ಪ್ರೀತಿಸುವಂತೆ ಓರ್ವ ಯುವಕ ಒತ್ತಾಯಿಸುತ್ತಿದ್ದ ಎಂದು ಹೇಳಲಾಗಿದೆ. ಇದೇ ವಿಚಾರಕ್ಕೆ ನಿನ್ನೆ ಈರಮ್ಮಳನ್ನ ಕರೆದೊಯ್ದು ಹತ್ಯೆಗೈದು ಬಳಿಕ ನೇಣು ಹಾಕಿರೊ ಆರೋಪ ಮಾಡಲಾಗಿತ್ತು.
ಘಟನಾ ಸ್ಥಳಕ್ಕೆ ಹೋಗಿದ್ದ ಇಡಪನೂರು ಪೊಲೀಸರು ಪರಿಶೀಲನೆ ನಡೆಸಿ, ಮೃತಳ ಪಾಲಕರಿಂದ ದೂರು ಪಡೆದು, ಈ ಆರೋಪಿಗಳಿಗಾಗಿ ಜಾಲಬೀಸಿದ್ದರು. 24 ಗಂಟೆಯಲ್ಲಿಯೇ ಪ್ರಕರಣ ಭೇದಿಸುವ ಮೂಲಕ ಮೂರು ಆರೋಪಿಗಳನ್ನ ವಶಕ್ಕೆ ಪಡೆದಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]