ಏನ್ ಆ್ಯಕ್ಟಿಂಗ್ ಗುರು, ಗುಲ್ಬದಿನ್​ಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಅಂದ ನೆಟ್ಟಿಗರು..

K 2 Kannada News
ಏನ್ ಆ್ಯಕ್ಟಿಂಗ್ ಗುರು, ಗುಲ್ಬದಿನ್​ಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಅಂದ ನೆಟ್ಟಿಗರು..
WhatsApp Group Join Now
Telegram Group Join Now

K2kannadanews.in

T20 world cup : ಬಾಂಗ್ಲಾದೇಶ(AFG vs BAN) ಅಫ್ಘಾನಿಸ್ತಾನ ವಿರುದ್ಧ ರೋಚಕ ಪಂದ್ಯದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆಸಿದೆ. ಈ ಪಂದ್ಯದಲ್ಲಿ ಆಘ್ಫಾನ್​ ತಂಡದ ಕೋಚ್​ ಜೊನಾಥನ್​ ಟ್ರಾಟ್(Jonathan Trott) ಅವರು ಆಟಗಾರರಿಗೆ ನೀಡಿದ ಸಲಹೆಯೊಂದರ ವಿಡಿಯೊ ವೈರಲ್​ ಆಗಿದೆ.

https://x.com/SportsProd37/status/1805457637489742058?t=k_zdl-K81PQN8Vpt6cFQZQ&s=19

ಟಿ20 ವಲ್ಡ್ ಕಪ್ ನಲ್ಲಿ ಸಾಕಷ್ಟು ರೋಚಕ‌ ಪಂದ್ಯಗಳು ನಡೆದಿದವೆ, ಸಾಕಷ್ಟು ಹಾಸ್ಯಮಯ ಸನ್ನಿವೇಶಗಳು ನಡೆದಿವೆ. ಬಾಂಗ್ಲಾದೇಶ(AFG vs BAN) ಅಫ್ಘಾನಿಸ್ತಾನ ಪಂದ್ಯ ಕೂಡಾ ಇಂಥದ್ದೆ ಒಂದು ಸನ್ಮಿವೇಶಕ್ಕೆ ಕಾರಣವಾಗಿ ಆ ವಿಡಿಯೋ ಸಖತ್ ಬೈರಲ್ ಆಗುತ್ತಿದೆ. ಡಕ್​ವರ್ತ್​ ಲೂಯಿಸ್​ ನಿಯದ ಪ್ರಕಾರ ಅಫಘಾನಿಸ್ತಾನ ತಂಡ ಮುಂದೆ ಇದ್ದ ವೇಳೆ ಜೋರಾಗಿ ಗಾಳಿ ಬೀಸಿ ಮಳೆ ಬರುವ ಲಕ್ಷಣ ಕಂಡುಬಂತು.

ಈ ವೇಳೆ ಡಗೌಟ್​ನಲ್ಲಿದ್ದ ಕೋಚ್​ ಜೊನಾಥನ್​ ಟ್ರಾಟ್ ಅವರು ನಿಧಾನವಾಗಿ ಆಡಿ, ಕೊಂಚ ಸಮಯ ವ್ಯರ್ಥ ಮಾಡುವಂತೆ ಸೂಚನೆ ನೀಡಿದರು. ಕೋಚ್​ ಸಲಹೆ ನೀಡುತ್ತಿದ್ದಂತೆ ಸ್ಲಿಪ್​ನಲ್ಲಿ ನಿಂತಿದ್ದ ಗುಲ್ಬದಿನ್ ನೈಬ್ ಏಕಾಏಕಿ ಕಾಲು ನೋವಿನಂತೆ ಕುಸಿದು ಬಿದ್ದರು. ಬಳಿಕ ಫಿಸಿಯೊ ಬಂದು ಅವರನ್ನು ತಪಾಸಣೆ ನಡೆಸಿದ್ದಾರೆ. ಈ ವಿಡಿಯೊ ಇದೀಗ ವೈರಲ್​ ಆಗಿದೆ. ನೆಟ್ಟಿಗರು ಈ ದೃಶ್ಯ ಕಂಡು ಗುಲ್ಬದಿನ್​ಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಎಂದು ಕಮೆಂಟ್​ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article