ದರ್ಶನ್ ಬಿಡುಗಡೆಗಾಗಿ ಅಮರೇಶ್ವರನ ಮೊರೆಹೋದ ಅಭಿಮಾನಿಗಳು..

K 2 Kannada News
ದರ್ಶನ್ ಬಿಡುಗಡೆಗಾಗಿ ಅಮರೇಶ್ವರನ ಮೊರೆಹೋದ ಅಭಿಮಾನಿಗಳು..
Oplus_0
WhatsApp Group Join Now
Telegram Group Join Now

K2kannadanews.in

Renukaswamy murder case ರಾಯಚೂರು : ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಹತ್ಯೆ ಪ್ರಕರಣ‌ (murder case), ದಿನೆ ದಿನೆ ಹೊಸ ತಿರುಗುಗಳನ್ನು ಪಡೆಯುತ್ತಿದೆ ಇದರ ಮಧ್ಯೆ, ದರ್ಶನ್ ಬಿಡುಗಡೆಯಾಗಲಿ ಎಂದು ಲಿಂಗಸುಗೂರಿನ ಅಭಿಮಾನಿಗಳು (Fans) ಇತಿಹಾಸ (historical) ಪ್ರಸಿದ್ಧ ಶ್ರೀ ಅಮರೇಶ್ವರನ (Amreshwar) ಮೊರೆ ಹೋಗಿದ್ದಾರೆ.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಪ್ರಸಿದ್ಧ ಅಮರೇಶ್ವರ ದೇವರಲ್ಲಿ (God) ಮೊರೆ ಹೋಗಿದ್ದಾರೆ. ಯರಡೋಣಿ ಗ್ರಾಮದ ಡಿ. ಬಾಸ್ ಸಂಘದ ಅಭಿಮಾನಿಗಳಿಂದ ದರ್ಶನ್ ಪೋಟೊ (Photo) ಹಿಡಿದು ಅಮರೇಶ್ವರ ದೇವಸ್ಥಾನಕ್ಕೆ ಸುಮಾರು 8 ಕಿ.ಮೀ. ಪಾದಯಾತ್ರೆ ಮೂಲಕ ತೆರಳಿ, ಅಮರೇಶ್ವರನ ಬಳಿ ದರ್ಶನ್ ಫೋಟೋ ತಿಳಿಸಿ ಪೂಜೆ ಮಾಡಿಸಿದ್ದಾರೆ. ಈ ಭಾಗದ ಪರಮಾತ್ಮ ಎಂದು ಶ್ರೀ ಅಮರೇಶ್ವರನನ್ನು ನಾವು ಆರಾಧಿಸುತ್ತೇವೆ. ಆ ದೇವರಲ್ಲಿ ಇಂದು ನಾವು ನಮ್ಮ ನೆಚ್ಚಿನ ನಟ ಆದಷ್ಟು ಬೇಗ ಪ್ರಕರಣದಿಂದ ಮುಕ್ತರಾಗಿ ಹೊರಗೆ ಬರಲಿ ಎಂದು ಬೇಡಿಕೊಳ್ಳಲು ಬಂದಿದ್ದೇವೆ.

ನಮ್ಮ ಬಾಸ್ ದರ್ಶನ್ ತಪ್ಪು ಮಾಡಿದ್ರೆ ಅದಕ್ಕೆ ಕಾನೂನು‌ (Law) ಇದೆ, ಸರ್ಕಾರ (Government) ಇದೆ, ಅದರ ಪ್ರಕಾರ ಕ್ರಮ ಆಗಲಿ. ತಪ್ಪಿತಸ್ಥರೆಂದು ತೀರ್ಮಾನವಾಗದೇ ಅಭಿಮಾನಿಗಳಿಗೆ, ಅವರಿಗೆ ನೋವು ಮಾಡಬೇಡಿ ಎಂದು ಮನವಿ ಮಾಡಿದರು. ದಯವಿಟ್ಟು ಮನುಷ್ಯತ್ವಕ್ಕೆ ಬೆಲೆ ಕೊಡಿ. ದರ್ಶನ್ ಬಾಸ್ ಯಾರಿಗೂ ನೋವು ಮಾಡುವವರಲ್ಲ. ಪ್ರಾಣಿಗಳನ್ನೇ ಅಷ್ಟೊಂದು ಪ್ರೀತಿಸುವವರು ಅವರು. ಅವರಿಂದ ಎಷ್ಟೋ ಒಳ್ಳೆಯ ಕೆಲಸಗಳಾಗಿವೆ. ಅವರಿಂದ ನಾವೂ‌ ಪ್ರೇರಿತರಾಗಿ ಒಳ್ಳೆಯ ಕೆಲಸ ಮಾಡಬೇಕು ಅನ್ನಿಸಿದೆ. ನಾವು ಯಾವ ಕಾರಣಕ್ಕೂ ಡಿ.ಬಾಸ್ ಅವ್ರನ್ನ ಬಿಟ್ಟುಕೊಡೋದಿಲ್ಲ. ಸಾಯೋವರೆಗೂ ನಾವು ಡಿ.ಬಾಸ್ ಅಭಿಮಾನಿಗಳಾಗಿಯೇ ಇರುತ್ತೇವೆ ಹೆಳಿದ್ದಾರೆ.

WhatsApp Group Join Now
Telegram Group Join Now
Share This Article