ಕೇಂದ್ರ & ರಾಜ್ಯ ಸರ್ಕಾರಗಳ ನೀತಿ ವಿರೋಧಿಸಿ ಅಹೋರಾತ್ರಿ ಧರಣಿ ಪ್ರತಿಭಟನೆ..

K 2 Kannada News
ಕೇಂದ್ರ & ರಾಜ್ಯ ಸರ್ಕಾರಗಳ ನೀತಿ ವಿರೋಧಿಸಿ ಅಹೋರಾತ್ರಿ ಧರಣಿ ಪ್ರತಿಭಟನೆ..
WhatsApp Group Join Now
Telegram Group Join Now

K2kannadanews.in

Local News ರಾಯಚೂರು : ಕೇಂದ್ರ (central)ಮತ್ತು ರಾಜ್ಯ (state) ಸರ್ಕಾರಗಳ ನೀತಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಇಂದಿನಿಂದ ಎರಡು ದಿನ ಅಹೋರಾತ್ರಿ ರಾತ್ರಿ ಪ್ರತಿಭಟನೆ (Protest) ಆರಂಬಿಸಿದೆ.

ಹೌದು ರಾಯಚೂರು (Raichur) ನಗರದ ಜಿಲ್ಲಾಧಿಕಾರಿ ಕಛೇರಿ (DC office) ಮುಂದಿನ ಟಿಪ್ಪುಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ಆರಂಬಿಸಿದೆ. ಕಳೆದ 50 ವರ್ಷಗಳಿಂದ (Years) ನಿರಂತರವಾಗಿ ಪಾಲನೆ, ಪೋಷಣೆ, ಶಿಕ್ಷಣ ಸಂವಿಧಾನಬದ್ಧ ಕರ್ತವ್ಯಗಳ ನಿರ್ವಹಿಸಲಾಗುತ್ತಿದೆ. 2013ರ ಆಹಾರ ಭದ್ರತೆ ಕಾಯ್ದೆ 2009ರ ಕಡ್ಡಾಯ ಶಿಕ್ಷಣ ಕಾಯ್ದೆ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟು, ಅಂಗನವಾಡಿ ಕಾರ್ಯಕರ್ತೆರು ಮತ್ತು ಸಹಾಯಕಿಯರ ಮೂಲಕ ಜಾರಿಗೊಳಿಸಲಾಗುತ್ತದೆ. ಸುಪ್ರೀಂಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ಗಳು ಇವರನ್ನು 3 ಮತ್ತು 4 ಗ್ರೇಡ್ನ ನೌಕರರನ್ನಾಗಿ ಪರಿಗಣಿಸಲು ಜಂಟಿ ನಿಯಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಬೇಕೆಂದೂ ತೀರ್ಪು ನೀಡಿದ್ದು, ಸುಪ್ರೀಂ ಕೋರ್ಟ್ 1972 ಗ್ರಾಜ್ಯುಟಿ ಪಾವತಿ ಕಾಯ್ದೆಯಡಿ ಅರ್ಹರೆಂದೂ ತೀರ್ಪು ನೀಡಿದೆ.

2014ರ ನಂತರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಪರಿಕ ಲ್ಪನೆ ಬದಲಾಯಿಸಿ, ನೀತಿ ಆಯೋಗದ ಶಿಫಾರಸ್ಸುಗಳಂತೆ 60:40ರ ಅನುಪಾತದ ಆಧಾರದಲ್ಲಿ ಕೇಂದ್ರ ಸರ್ಕಾರ ತನ್ನ ಮೂಲ ಜವಾಬ್ದಾರಿ ಯಿಂದ ನುಣಿಚಿಕೊಂಡು ಬಜೆಟ್ ಅನುದಾನ ನಿರಂತರವಾಗಿ ಕಡಿಮೆ ಮಾಡುತ್ತಿದೆ. ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಲಹೀನಗೊಳಿಸಲು ಶಿಕ್ಷಣ ಇಲಾಖೆ 4 ವರ್ಷದ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸಲು ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಯತ್ನಿಸು ತುದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿ ವಿರೋಧಿಸಲಾಯಿತು. ಗುಜರಾತ್ ಹೈಕೊರ್ಟ್ ತೀಪಿ೯ನಂತೆ ಕಾರ್ಯಕರ್ತೆಯರ, ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article