K2kannadanews.in
Illicit relationship ಸಿರವಾರ : ಪೊಲೀಸ್ ಪತ್ನಿಯನ್ನು (Police wife) ಬಿಟ್ಟು, ಪ್ರೇಯಸಿ (lover) ಜೊತೆ ಚೆಲ್ಲಾಟವಾಡುವಾಗಲೇ ಹೆಂಡ್ತಿ ಕೈಗೆ ರೆಡ್ಹ್ಯಾಂಡ್ (Read hand) ಆಗಿ ಹೆಡ್ ಕಾನಿಸ್ಟೆಡಬಲ್ (head constable) ಸಿಕ್ಕಿಬಿದ್ದ ಘಟನೆ ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ಪಟ್ಟಣದಲ್ಲಿ ಘಟನೆ ಜರುಗಿದ್ದು, ಗಂಡ (Husband) ಸಿರವಾರ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದ, ಹೆಂಡ್ತಿ (Wife) ದೇವದುರ್ಗ ಠಾಣೆ ಕಾನ್ಸ್ ಟೇಬಲ್ ಆಗಿದ್ದರು. ಆದ್ರೆ ರಾಜ್ ಮೊಹಮ್ಮದ್ ಎಂಬ ಹೆಡ್ ಕಾನಿಸ್ಟೇಬಲ್ ಬೇರೆ ಹೆಣ್ಮಗಳ ಪ್ರೀತಿಯ ಬಲೆಗೆ ಬಿದ್ದಿದ್ದ, ಮನೆಯೊಂದರಲ್ಲಿ (House) ಪ್ರೇಯಸಿ ಜೊತೆ ಚೆಲ್ಲಾಟವಾಡುವಾಗಲೇ ಹೆಂಡ್ತಿ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ರಾಜ್ ಮೊಹಮ್ಮದ್, ಪ್ರೇಯಸಿಗಾಗಿ ಕಳೆದ 4 ವರ್ಷಗಳಿಂದ (Years) ಪತ್ನಿಯನ್ನು ದೂರ ಮಾಡಿದ್ದ ಎಂದು ಆರೋಪಿಸಲಾಗಿದೆ.
ಆದ್ರೆ ಈ ಬಾರಿ ಹೆಡ್ಕಾನ್ಸ್ಟೇಬಲ್ ರಾಜ್ ಮೊಹಮ್ಮದ್, ಸಿರವಾರ ಪಟ್ಟಣದಲ್ಲಿ ಮನೆಯೊಂದರಲ್ಲಿ ಪ್ರೇಯಸಿ ಜೊತೆ ಇರುವಾಗಲೇ ಪತ್ನಿ ಪ್ಯಾರಿ ಬೇಗಂ ಲಾಕ್ ಮಾಡಿ ಬಳಿಕ ಎಸ್ಪಿಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಠಾಣೆ ಪೊಲೀಸರು ಆಗಮಿಸಿ, ಮನೆ ಲಾಕ್ ಓಪನ್ ಮಾಡಿ ಹೆಡ್ಕಾನ್ಸ್ಟೇಬಲ್ ರಾಜ್ ಮೊಹಮ್ಮದ್ ಮತ್ತು ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದಾರೆ.