ಹಣಕಾಸು ವಿಚಾರಕ್ಕೆ ಗ್ರಾ.ಪಂಚಾಯತಿ ಸದಸ್ಯನಿಂದ ಶಿಕ್ಷಕನಿಗೆ ಚಾಕು ಇರಿತ..

K 2 Kannada News
ಹಣಕಾಸು ವಿಚಾರಕ್ಕೆ ಗ್ರಾ.ಪಂಚಾಯತಿ ಸದಸ್ಯನಿಂದ ಶಿಕ್ಷಕನಿಗೆ ಚಾಕು ಇರಿತ..
WhatsApp Group Join Now
Telegram Group Join Now

K2kannadanews.in

Crime News ಲಿಂಗಸುಗೂರ : ಹಣಕಾಸಿನ ವಿಚಾರದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮತ್ತು ಶಿಕ್ಷಕನ ಮಧ್ಯೆ ಗಲಾಟೆಯಾಗಿ ಶಿಕ್ಷಕನಿಗೆ ಗ್ರಾಮ ಪಂಚಾಯತಿ ಸದಸ್ಯ ಚಾಕುವಿನಿಂದ ಇರಿದ ಘಟನೆ ಮುದಗಲ್ ಪಟ್ಟಣದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದುಗಲ್ ಪಟ್ಟಣದಲ್ಲಿ ಘಟನೆ ನಡೆದಿದ್ದು, ಹಾಡುಹಗಲೇ ಖಾಸಗೀ ಪೈನಾನ್ಸ್ ಕಚೇರಿಯಲ್ಲೇ ಕೃತ್ಯ ನಡೆದಿದ್ದು, ಅಡವಿಟ್ಟ ಬಂಗಾರ ಬಿಡಿಸಿಕೊಳ್ಳಲು ಬಂದಾಗ ಶಿಕ್ಷಕನ ಮೇಲೆ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಆರೋಪಿ ವೀರಣ್ಣ ಮಾಕಾಪೂರು ಬಳಿ ಲಕ್ಷಾಂತರ ರೂ ಬಡ್ಡಿ ಸಾಲ ಪಡೆದಿದ್ದ ಸರಕಾರಿ ಶಾಲೆಯ ಶಿಕ್ಷಕ ಹನುಮಂತ ‌ಕಂಬಾರ್. ಇದೇ ವಿಚಾರಕ್ಕೆ ಸಾಲದ ಜೊತೆ ಬಡ್ಡಿ ಕೊಡುವಂತೆ ವೀರಣ್ಣ ಮಾಕಾಪೂರು ಕಿರುಕುಳ ನೀಡುತ್ತಿದ್ದ ಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿ ಕೊನೆಗೆ ಚಾಕುವಿನಿಂದ ಇರಿದು ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

ಚಾಕು ದಾಳಿಯಿಂದ ಶಿಕ್ಷಕ ಹನುಮಂತ ಕಂಬಾರ್ ಗೆ ಗಂಭೀರ ಗಾಯವಾಗಿದ್ದು, ಗಾಯಾಳು ಹನುಮಂತ ಕಂಬಾರ್ ಗೆ ಮುದುಗಲ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಂತರ ಆರೋಪಿ ವೀರಣ್ಣ ಮಾಕಾಪೂರು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇನ್ನೂ ಘಟನೆಯು ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

WhatsApp Group Join Now
Telegram Group Join Now
Share This Article