K2kannadanews.in
Crime News ಲಿಂಗಸೂಗೂರು : ಕುಡಿದ ಅಮಲಿನಲ್ಲಿ ಬಾವಿಗೆ ಬಿದ್ದು 21ರ ಯುವಕ ಸಾವನ್ನಪ್ಪಿದ ಘಟನೆ ಐದನಾಳ ಗ್ರಾಮದಲ್ಲಿ ನಡೆದಿದ್ದು, ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಐದನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಯುವಕನನ್ನು 21 ವರ್ಷದ ಗಣೇಶ್ ಎಂದು ಗುರುತಿಸಲಾಗಿದ್ದು, ನಿಂಗಪ್ಪ, ರಮೇಶ್ ಎಂಬುವವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಯುವಕ ಮದ್ಯಪಾನ ಮಾಡಿದ್ದ. ಕುಡಿದ ಅಮಲಿನಲ್ಲಿ ಬಾವಿಯ ಬಳಿ ತೆರಳಿದಾಗ ಕಾಲು ಜಾರಿ ಬಾವಿಗೆ ಬಿದ್ದು, ಸಾವನ್ನಪ್ಪಿರುವುದಾಗಿ ಸ್ನೇಹಿತರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಆದರೆ ಮೃತನ ಕುಟುಂಬಸ್ಥರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ ಹಿನ್ನಲೆ, ಕೊಲೆ ಮಾಡುವ ಉದ್ದೇಶದಿಂದಲೇ ಪಾರ್ಟಿ ಮಾಡಲು ಕರೆದೊಯ್ದಿದ್ದಾರೆ ಎಂದು ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.