K2kannadanews.in
Local News ಲಿಂಗಸುಗೂರ : ಉತ್ತಮ ಮಳೆಯ ನಡುವೆ ರೈತರಿಗೆ ವಿವಿಧ ಸಂಕಷ್ಟ ಎದುರಾಗಿದೆ. ಒಂದುಕಡೆ ಗೊಬ್ಬರ ಕೊರತೆ ಆದ್ರೆ, ಇಲ್ಲೊಂದುಕಡೆ ಅದೇ ರೈತರಿಗೆ ವಿಲನ್ ಆಗಿದೆ ಕುದುರೆ. ಒಂದೇ ಒಂದು ಕುದುರೇ ಸುಮಾರು 70ಎಕರೆಯಷ್ಟು ಬೆಳೆ ನಾಶ ಮಾಡಿದೆ. ಹೇಗೆ ಅಂತೀರಾ ಈ ಸ್ಟೋರಿ ನೋಡಿ..
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ನಾಗರಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂದುಕಡೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ರೈತರ ಮುಖದಲ್ಲಿ ಸಂತಸ ಅರಳಿ, ನಾಟಿ ಮಾಡಿ ಉತ್ತಮ ಬೆಳೆಯ ನಿರೀಕ್ಷಯಲ್ಲಿದ್ದಾರೆ. ಆದರೇ ಒಂದು ಕಡೆ ಗೊಬ್ಬರದ ಕೊರತೆಯಿಂದ ಕಂಗಾಲಾಗಿದ್ದಾರೆ. ಆದ್ರೆ ನಾಗರಾಳ ಸುತ್ತಮುತ್ತಲಿನ ಗ್ರಾಮಸ್ಥರು ಮಾತ್ರ ಒಂದು ಕುದುರೆ ಕಾಟದಿಂದ ಬೇಸತ್ತು ಹೋಗಿದ್ದಾರೆ. ಕಾರಣ ಒಂದೇ ಒಂದು ಕುದುರೇ 70 ಎಕರೆ ವಿವಿಧ ಬೆಳೆ ನಾಶ ಮಾಡಿದೆ. ಇದು ರೈತರ ತಲೆನೋವಿಗೆ ಕಾರಣವಾಗಿದೆ. ಜಿಟಿ ಜಿಟಿ ಮಳೆಯಲ್ಲಿ ಕುದುರೆಗೆ ಚಲ್ಲಾಟವಾದ್ರೆ, ರೈತರಿಗೆ ಸಂಕಷ್ಟವಾಗಿದೆ. ರೈತರು ಬೆಳೆದ ಮಾವು, ತೊಗರಿ, ಹತ್ತಿ, ಸೂರ್ಯಕಾಂತಿ, ಹೆಸರು, ಸೌತೆಕಾಯಿ ಸೇರಿ ಹಲವು ಬೆಳೆ ಕುದುರೆಯಿಂದ ನಾಶವಾಗಿದೆ. ಅಷ್ಟೆ ಅಲ್ಲದೇ ರೈತ ಸಾಕಿದ ನಾಯಿಯನ್ನು ಬಲಿಪಡೆದಿದೆ, ಕುದುರೆಯನ್ನುಬಚದುರಿಸಲು ಒಂಟಿ ರೈತ ಹೋದರೆ ಅವರ ಮೇಲೆಯೇ ಎರಗುತ್ತೆ ಅಂತ ರೈತರು ಗಂಭೀರವಾಗಿ ಆರೋಪಿಸುತ್ತಾರೆ.
ಇನ್ನೂ ಈ ಒಂದು ಕುದುರೇ ಕಾಟ ಕಳೆದ 3 ತಿಂಗಳಿಂದ ನಾಗರಹಾಳ ಗ್ರಾಮದಲ್ಲಿ ಬೀಡು ಬಿಟ್ಟ ಕುದುರೆ ಸಾಕಷ್ಟು ತೊಂದರೆ ಕೊಡುತ್ತಿದೆ. ಅತ್ತವ ಬೆಳೆ ಉಳಿಸಿಕೊಳ್ಳುಲು ರಾತ್ರಿ, ಹಗಲು, ನಸುಕಿನ ಜಾವಾ ಜಮೀನುಗಳಿಗೆ ತೆರಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ರೈತರ ಹೆಸೆರು ಕಾಳು ಬೆಳೆ ಬಾಗಶಃ ಕೊಯ್ಲಿಗೆ ಬಂದಿದ್ದು, ಆ ಒಂದು ಬೆಳೆಯನ್ನು ಕುದುರೆ ಹಾಳು ಮಾಡುತ್ತಿದೆ. ಇದರಿಂದ ಇನ್ನಷ್ಟು ಬೆಳೆ ಹಾಳು ಮಾಡುವ ಮುನ್ನ ಸಂಬಂದ ಪಟ್ಟ ಇಲಾಖೆ, ಅಧಿಕಾರಿಗಳು ಈ ಒಂದು ಕುದುರೆಯನ್ನು ಸೆರೆ ಹಿಡಿದು ಬೆರೆಡೆಗೆ ಸಾಗಿಸಲು ಅಲ್ಲಿನ ರೈತರು ಮನವಿ ಮಾಡುತ್ತಿದ್ದಾರೆ. ಅದೇನೆ ಇರಲಿ ಉತ್ತಮ ಮಳೆ ಬೆಳೆ ಇರುವ ಕಾಲದಲ್ಲಿ ಒಂದುಕಡೆ ಗೊಬ್ಬರದ ಕೊರತೆ ಎದುರಿಸುತ್ತಿರುವ ರೈತರಿಗೆ, ಈ ಒಂದು ಕುದುರೆ ಮತ್ತಷ್ಟು ಸಂಕಷ್ಟ ತಂದೊಡ್ಡುತ್ತಿದೆ. ಅರಣ್ಯ ಇಲಾಖೆ, ಪಂಚಾಯತಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ಕುದುರೆ ಕಾಟದಿಂದ ಮುಕ್ತಿ ಕೊಡಿಸಬೇಕಿದೆ.