K2kannadanews.in
Local News ಲಿಂಗಸುಗೂರ : ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಕೃಷ್ಣಾ ತೀರದ ನಡುಗಡ್ಡೆ ಕರಕಲಗಡ್ಡಿಯಲ್ಲಿ ಬಾಲಕಿ ಸೇರಿ ಇವರು ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪರಿತಪಿಸುತ್ತಿದ್ದರು. ಈ ವೇಳೆ ಮಾಹಿತಿ ತಿಳಿದು ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಜ್ವರದಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ನೀಡಿದ್ದಾರೆ. ಸಿಬ್ಬಂದಿಗಳು ಅಲ್ಲಿಗೆ ತಲುಪಿದೆ ಸಾಹಸ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಕರಕಲಗಡ್ಡಿ ಗ್ರಾಮ ಇದೀಗ ನಡುಗೆಡ್ಡೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದ್ದು, ಆಸ್ಪತ್ರೆಗೆ ತೆರಳಲು ರಸ್ತೆ ಇಲ್ಲದಂತಾಗಿ ಕಳೆದ ಮೂರು ದಿನಗಳಿಂದ ಚಿಕಿತ್ಸೆಗಾಗಿ ಪರಿತಪಿಸುತ್ತಿದ್ದರು. ಬಸವಸಾಗರ ಜಲಾಶಯದಿಂದ 1.06 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿರುವ ಹಿನ್ನೆಲೆ ಬಾಲಕಿಯ ಕುಟುಂಬದವರಿಗೆ ತೆಪ್ಪದಲ್ಲಿ ನದಿ ದಾಟಲು ಸಾಧ್ಯವಾಗುತ್ತಿರಲಿಲ್ಲ.
ಮಾಹಿತಿ ತಿಳಿಯುತ್ತಿದ್ದಂತೆ ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಅವರು ಬಾಲಕಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಕರಕಲಗಡ್ಡಿಯಲ್ಲಿ ಏಳು ಜನ ಉಳಿದುಕೊಂಡಿದ್ದು, 25 ದಿನಗಳ ಹಿಂದೆ ಲಿಂಗಸುಗೂರಿಗೆ ಬಂದು ದಿನಸಿ ಸಾಮಗ್ರಿಗಳನ್ನು ಖರೀದಿಸಿಕೊಂಡು ಹೋಗಿದ್ದಾರೆ. ಈಗ ದಿನಸಿಯೂ ಖಾಲಿಯಾಗುತ್ತಿದೆ ಎಂಬ ಮಾಹಿತಿ ತಿಳಿದು, ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳನ್ನು ಕಳುಹಿಸಿ 2-3 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿ ಅನಿತಾ, ತಂದೆ ಸೇರಿ 5 ಜನರಿಗೆ ಆರೋಗ್ಯ ತಪಾಸಣೆ ಮಾಡಿ ಔಷಧ ವಿತರಿಸಿ, ಆಹಾರ ಸಾಮಗ್ರಿಗಳನ್ನ ಒದಗಿಸಿದ್ದಾರೆ.