ಉಸ್ತುವಾರಿ ತರಾಟೆಗೆ ತೆಗೆದುಕೊಂಡ ಕೈ ಕಾರ್ಯಕರ್ತ : ಅಷ್ಟಕ್ಕೂ ಆಗಿದ್ದೇನು?

K 2 Kannada News
ಉಸ್ತುವಾರಿ ತರಾಟೆಗೆ ತೆಗೆದುಕೊಂಡ ಕೈ ಕಾರ್ಯಕರ್ತ : ಅಷ್ಟಕ್ಕೂ ಆಗಿದ್ದೇನು?
WhatsApp Group Join Now
Telegram Group Join Now

K2kannadanews.in

Political News ರಾಯಚೂರು : ಸಚಿವ ಶರಣ ಪ್ರಕಾಶ್ ಪಾಟೀಲ್​ಗೆ ಕಾಂಗ್ರೆಸ್ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಿದ್ದು, ಲಿಂಗಸುಗೂರಿಗೆ ಭೇಟಿ ನೀಡಿದ್ದರು, ಈ ವೇಳೆ ಕಾರ್ಯಕರ್ತನೋರ್ವ ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದ್ದಾನೆ.

 

ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ಲಿಂಗಸುಗೂರು ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಎದ್ದು ಬರುವಾಗ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬೆಂಬಲಿಗ ಗದ್ದೆನಗೌಡ ಏರಿದ ದನಿಯಲ್ಲಿ ಪ್ರಶ್ನಿಸಿದ್ದಾರೆ. ಪೂರ್ವ ಮಾಹಿತಿ ಇಲ್ಲದೇ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೂ ತಾರದೇ ಏಕಾಏಕಿ ತಾಲೂಕಿಗೆ ಬಂದರೆ ಹೇಗೆ ಎಂದು ಕಾರ್ಯಕರ್ತ ಪ್ರಶ್ನಿಸಿದ್ದಾರೆ.

ಈ ವೇಳೆ ಗಲಿಬಿಲಿಗೊಂಡ ಸಚಿವರು, ನಿಮಗೆ ಏಕೆ ಹೇಳಬೇಕು ? ನಾನ್ಸ್‌ನ್ಸ್‌ ತರ ಮಾತನಾಡಬೇಡ ಎಂದು ಗದರಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಗದ್ದೆನಗೌಡ, ನಾನು ನಿಷ್ಠಾವಂತ ಕಾರ್ಯಕರ್ತ. ಸ್ಥಳೀಯರಿಗೆ ನೀವು ಬರುವ ಮಾಹಿತಿ ಇಲ್ಲದಿದ್ದರೆ ಹೇಗೆ ಎಂದು ಮರು ಉತ್ತರ ನೀಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ತಾರಕಕ್ಕೇರುವುದನ್ನು ಅರಿತ ಸ್ಥಳದಲ್ಲಿದ್ದ ಮುಖಂಡರು, ಕಾರ್ಯಕರ್ತರು ಹಾಗೆಲ್ಲ ಮಾತನಾಡುವುದು ಸರಿಯಲ್ಲ ಎನ್ನುವ ಮೂಲಕ ಗದ್ದೆನಗೌಡ ಅವರಿಗೆ ಬುದ್ಧಿವಾದ ಹೇಳಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

WhatsApp Group Join Now
Telegram Group Join Now
Share This Article