K2kannadanews.in
Crime News ಹಟ್ಟಿ : ದೇಶದ ಏಕೈಕ ಚಿನ್ನ (Gold) ಉತ್ಪಾದನೆಯ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ (hatti gold main) ಭೂಕುಸಿತವಾಗಿ ಕಾರ್ಮಿಕ ನರವಣಿಗೆ ಗಂಭೀರ ಗಾಯವಾದ ಘಟನೆ ಜರುಗಿದೆ.
ರಾಯಚೂರು (Raichur) ಜಿಲ್ಲೆಯ ಲಿಂಗಸಗೂರು (Lingasuguru) ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಇರುವ ಚಿನ್ನ ಉತ್ಪಾದನೆಯ ಚಿನ್ನದ ಕಣೆ ಕಂಪನಿಯ ಅಂಡರ್ ಗ್ರೌಂಡ್ (Underground) ನಲ್ಲಿ ಘಟನೆ ಜರುಗಿದೆ. ಲಕ್ಷ್ಮಣ ಗಂಭೀರ ಗಾಯಗೊಂಡ ಗಣಿ ಕಾರ್ಮಿಕ. ಮಧ್ಯಾಹ್ನ ಪಾಳಿಯಲ್ಲಿ ಕೆಲಸ ಮಾಡುವಾಗ ಅವಘಡ ಸಂಭವಿಸಿದೆ. ಸಡಿಲ ಅದಿರು ಮಣ್ಣು ಕುಸಿದು ಬಿದ್ದ ಪರಿಣಾಮ ತಲೆ ಹಾಗೂ ಕೈ-ಕಾಲಿಗೆ ಗಂಭೀರ ಗಾಯಗಳಾಗಿವೆ.
ಸ್ಧಳೀಯ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಸ್ಧಳಕ್ಕೆ ಗಣಿ ಕಂಪನಿಯ ಅಧಿಕಾರಿಗಳ ತಂಡ ಭೇಟಿ ನೀಡಿ, ಕಾರ್ಮಿಕನಿಗೆ ಆದ ಗಾಯದ ಮಾಹಿತಿ ಪಡೆದರು. ಸ್ಧಳಕ್ಕೂ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಗಣಿ ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯು ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.