K2kannadanews.in
Local News ಲಿಂಗಸೂಗೂರು : ಮೂರು ತಿಂಗಳು ಕಷ್ಟ ಪಟ್ಟು ಬೆಳೆದು, ರಾಶಿ ಮಾಡಲು ಕೂಡಿಟ್ಟ ತೊಗರಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಗೋರೆಬಾಳ ಗ್ರಾಮದಲ್ಲಿ ನಡೆದಿದೆ.
ಹೌದು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಗೊರೆಬಾಳದಲ್ಲಿ ಘಟನೆ ನಡೆದಿದ್ದು, ನಿನ್ನೆ ತಡರಾತ್ರಿ ಆಕಸ್ಮಿಕವಾಗಿ ಹೊತ್ತಿದ ಬೆಂಕಿಗೆ ತೊಗರಿ ರಾಶಿ ಸುಟ್ಟು ಬೂದಿಯಾಗಿದೆ. ಗ್ರಾಮದ ಆಂಜನೇಯ ಗುತ್ತೆದಾರ ಎಂಬ ರೈತ ನಾಲ್ಕು ಎಕರೆಯಲ್ಲಿ ಬೆಳೆದಿದ್ದ. ಕಳೆ ಒಂದು ವಾರದಿಂದ ತೊಗರಿ ಬಿಡಿಸಿ, ಮಿಷನ್ ಗೆ ಹಾಕಲು ರಾಶಿ ಮಾಡಿದ್ದ ರೈತ ಆಂಜನೇಯ. ಕಳೆದ ರಾತ್ರಿ ಏಕಾಏಕಿ ತೊಗರಿ ರಾಶಿಗೆ ಬೆಂಕಿ ತಗುಲಿದೆ.
ಇನ್ನೂ ಬೆಂಕಿ ಕೆನ್ನಾಲಿಗೆಯಲ್ಲಿ ಸಂಪೂಣ ತೊಗರಿ ರಾಶಿ ಸುಟ್ಟು ಬೂದಿಯಾಗಿದೆ. ಅಲ್ಲೆ ಇದ್ದ ಕೆಲ ರೈತರು ಬೆಂಕಿ ನಂದಿಸಲು ಪ್ರಯತ್ನಸಿದರೂ ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತೊಗರಿ ಸುಟ್ಟು ಭಸ್ಮವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಬೆಳೆ ಕಳೆದುಕೊಂಡ ರೈತ ಆಂಜನೇಯ ಮನವಿ ಮಾಡಿದ್ದಾನೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಜರುಗಿದೆ.