K2kannadanews.in
Counterfeit notes ರಾಯಚೂರು : ಸಾರ್ವಜನಿಕ ಸ್ಥಳ ಸೇರಿ ಜಿಲ್ಲೆಯಾದ್ಯಂತ ಕೋಟ ನೋಟು ಹಾವಳಿ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸುತ್ತಿದ್ದು, ಪೆಟ್ರೋಲ್ ಬಂಕ್ ಮತ್ತು ಸಣ್ಣ ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ಸಿರವಾರ ಲಿಂಗಸುಗೂರು ತಾಲೂಕುಗಳಲ್ಲಿ ಈ ಒಂದು ಕೋಟ ನೋಟು ಹಾವಳಿ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಸಿರವಾರ ತಾಲೂಕಿನ ಹಲವು ಗ್ರಾಮಗಳಲ್ಲಿ ಕಳೆದ ಕೆಲ ತಿಂಗಳುಗಳಿಂದ ಖೋಟಾ ನೋಟು ಚಲಾವಣೆಯಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ.ಹಿರೇಹಣಗಿ ಗ್ರಾಮದ ಪೆಟ್ರೋಲ್ ಬಂಕಿನಲ್ಲಿ 500 ಮುಖಬೆಲೆಯ 2 ನೋಟುಗಳು ಹಾಗೂ ಅದೇ ಗ್ರಾಮದ ಪಾನ್ ಶಾಪ್ ಅಂಗಡಿಯಲ್ಲೂ ಒಂದು ನೋಟು ಕಂಡುಬಂದಿದೆ.ಸಿರವಾರ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಂಗಡಿಗಳು ಮತ್ತು ವ್ಯಾಪಾರಸ್ಥರಲ್ಲಿ 500 ಮುಖಬೆಲೆಯ ನಕಲಿ ನೋಟು ಚಲಾವಣೆಯಲ್ಲಿದೆ.
ನಿನ್ನೆ ಅಷ್ಟೇ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿನ ತರಕಾರಿ ಅಂಗಡಿಯಲ್ಲಿ ಕೂಟ ನೋಟು ಪತ್ತೆಯಾದ ಘಟನೆ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಅಗಿದೆ. ಅಲ್ಲದೇ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ, ಕೋಠ, ಮುದಗಲ್ ಮತ್ತಿತರ ಕಡೆಯೂ ಖೋಟಾ ನೋಟುಗಳ ಹಾವಳಿ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಅನೇಕರು ಈ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯರು, ಸಂಬಂದಪಟ್ಟ ಇಲಾಖೆ ಮತ್ತು ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಒಂದು ನೋಟುಗಳು ನಿಜಕ್ಕೂ ನಕಲಿ ನೋಟುಗಳಾ ಅಥವಾ ಬೇಕು ಅಂತಾ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗುತ್ತಿದೆಯೇ ಎಂ ಸತ್ಯತೆ ತಿಳಿಯಬೇಕಿದೆ.