K2kannadanews.in
Crime News ಲಿಂಗಸೂಗೂರು : ಲಿಂಗಸುಗೂರು ಪಟ್ಟಣದಲ್ಲಿ ಕಳ್ಳರ ಗ್ಯಾಂಗ್ (Thieves gang) ಒಂದು ಬೇಡು (Camp) ಬಿಟ್ಟಿದ್ದು, ರಾತ್ರಿ (Night) ವೇಳೆ ಕನ್ನ ಹಾಕಲು ಯತ್ನಿಸಿದ ವಿಡಿಯೋ ಒಂದು ವೈರಲ್ (Video viral) ಆಗಿದೆ. ಈ ಹಿನ್ನೆಲೆ ಪೊಲೀಸ್ ಇಲಾಖೆ (Police) ಅಲರ್ಟ್ ಆಗಿದ್ದು ಹುಡುಕಾಟ ಆರಂಭಿಸಿದೆ.
ರಾಯಚೂರು (Raichur) ಜಿಲ್ಲೆಯ ಲಿಂಗಸಗೂರು (Lingasuguru) ಪಟ್ಟಣದಲ್ಲಿ ರಾತ್ರಿ ವೇಳೆ ಆರು ಜನರ ಕಳ್ಳರ ತಂಡ ಒಂದು ಮನೆಗೆ ಕಳ್ಳತನ ಯತ್ನ (Try) ಮಾಡಿ ವಿಫಲವಾಗಿ ವಾಪಸ್ ತೆರಳಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಇನ್ನು ವೈರಲ್ ಆಗಿರುವ ವಿಡಿಯೋ ಗಮನಿಸಿದಾಗ. ನವಂಬರ್ 11ರಂದು ಮಧ್ಯರಾತ್ರಿ (Midnight) 1 ಗಂಟೆ 40 ನಿಮಿಷ ಸುಮಾರಿಗೆ ಕಳ್ಳರ ಗ್ಯಾಂಗ್ ಒಂದು ಎಂಟ್ರಿ ಕೊಡುತ್ತದೆ ಪೂರ್ವ ವ್ಯಕ್ತಿ ಮನೆಯ ಒಳಗೆ ಮೆಟ್ಟಿಲು ಹತ್ತಿಕೊಂಡು ಹೋಗುವ ವಿಡಿಯೋ ಸರಿಯಾಗಿದೆ.
ಅಲ್ಲದೆ ಇನ್ನುಳಿದ ಐದು ಜನ ರಸ್ತೆಯಲ್ಲಿ (road) ಮುಂದೆ ಹೋಗುವ ವಿಡಿಯೋ ಇದ್ದು, ಅದರಲ್ಲಿ ಕೆಲ ವ್ಯಕ್ತಿಗಳು ತಾವು ಕಾಲಿಗೆ ಹಾಕಿದ ಪಾದರಕ್ಷೆಗಳನ್ನು ಕೂಡ ಬಿಚ್ಚುವ ವಿಡಿಯೋ ಸೆರಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಲಿಂಗಸುಗೂರು ಪೊಲೀಸರು ಅಲರ್ಟ್ ಆಗಿದ್ದು ಕಳ್ಳರ ತಂಡಕ್ಕಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಜೊತೆಗೆ ಪಟ್ಟಣದಲ್ಲಿ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದು ಮನೆ ಬೇಗ ಹಾಕುವುದಾದರೆ ಊರಿಗೆ ತೆರಳುವುದಾದರೆ ಇಲಾಖೆಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಿದ್ದಾರೆ.