K2kannadanews.in
Health Tips ಆರೋಗ್ಯ ಭಾಗ್ಯ : ಸಾಮಾನ್ಯವಾಗಿ ಬಿಸಿನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಹಲವು ಪ್ರಯೋಜನಗಳಿವೆ ಅಂತಾರೆ. ಆದ್ರೆ ಪ್ರತಿ ವ್ಯಕ್ತಿಯ ದೇಹದ ಅಗತ್ಯಗಳು ಬೇರೆ ಬೇರೆಯಾಗಿರುತ್ತೆ. ಅದ್ರಲ್ಲಿ ಕೆಲವರು ಬಿಸಿನೀರು ಕುಡಿಯುವುದು ತಪ್ಪಿಸಬೇಕು. ಕಾರಣ ಬಿಸಿನೀರು ಎಲ್ಲರಿಗೂ ಒಂದೇ ರೀತಿಯ ಪರಿಣಾಮ ಬೀರಲ್ಲ. ಯಾವ ರೀತಿಯ ಆರೋಗ್ಯ ಸಮಸ್ಯೆ ಇರುವವರು ಬಿಸಿನೀರು ಕುಡಿಬಾರ್ದು ತಿಳಿಯುವುದು ಮುಖ್ಯ.
ಹೌದು ಕೆಲವು ಸಂದರ್ಭದಲ್ಲಿ ಬಿಸಿ ನೀರು ನಮ್ಮ ದೇಹಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಯಾವ ಸಮಯದಲ್ಲಿ ಬಿಸಿನೀರು ಕುಡಿಯಬಾರದು ಮತ್ತು ಯಾರು ಕುಡಿಯಬಾರದು ಅನ್ನೋದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಶೀತ ಮತ್ತು ಕೆಮ್ಮು ಇದ್ದಾಗ, ಬಿಸಿನೀರನ್ನು ಕುಡಿಯುವುದು ಬಿಡಬೇಕು. ಕಾರಣ ಬಿಸಿನೀರು ಗಂಟಲಿನಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ. ಕುಡಿಯಲೇ ಬೇಕು ಅಂದ್ರೆ ಬೆಚ್ಚಗಿನ ನೀರು ಕುಡಿದ್ರೆ, ಅವರ ಗಂಟಲಿಗೆ ಒಳ್ಳೆಯದು.
ಪಿತ್ತಜನಕ ಅಂಗದ ಕಾಯಿಲೆ ಇರುವವರು ಬಿಸಿ ನೀರನ್ನು ಕುಡಿಯಬಾರದು, ಕಾರಣ ಯಕೃತ್ತಿನ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ಪಿತ್ತಜನಕಾಂಗ ತೀರಾ ಸೂಕ್ಷ್ಮವಾಗಿರುತ್ತೆ, ಯಾವುದೇ ಸಮಸ್ಯೆ ಇದ್ದರೂ ದೇಹದ ವಿವಿಧ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ನೂ ಚಿಕ್ಕ ಮಕ್ಕಳು ವಯಸ್ಕರಂತೆ ಬಿಸಿನೀರನ್ನು ಕುಡಿಯಬಾರದು. ಕಾರಣ ಜೀರ್ಣಾಂಗ ವ್ಯವಸ್ಥೆ ದೊಡ್ಡವರಂತಲ್ಲ ಅದು ತುಂಬಾ ಸೂಕ್ಷ್ಮವಾಗಿರುತ್ತದೆ. ಬಿಸಿನೀರನ್ನು ಸೇವಿಸುವುದರಿಂದ ಅವರ ಹೊಟ್ಟೆಗೆ ಹಾನಿಯಾಗುತ್ತದೆ.
ಚರ್ಮದ ಸೂಕ್ಷ್ಮತೆ ಅಥವಾ ಅಲರ್ಜಿ ಹೊಂದಿರುವವರಿಗೆ ಬಿಸಿ ಮತ್ತು ತುಂಬಾ ತಂಪಾದ ನೀರು ಹಳೆಯ ನೋವನ್ನು ಹೆಚ್ಚಿಸಬಹುದು. ಸಮಸ್ಯೆ ಹೆಚ್ಚಿಸಲು ಬಯಸದಿದ್ದರೆ ಕಾಯಿಸಿ ಆರಿಸಿದ ನೀರು ಕುಡಿಯಿರಿ. ಹೀಗೆ ಬಿಸಿನೀರು ಎನ್ನುವುದು ಈ ಎಲ್ಲರ ದೇಹಗಳಿಗೆ ಹೊಂದಿಕೊಳ್ಳುವಂಥದ್ದಲ್ಲ, ಕೆಲವು ಆರೋಗ್ಯ ಸಮಸ್ಯೆ ಇರುವಂತವರು ಈ ಒಂದು ಬಿಸಿ ನೀರನ್ನು ಬಿಟ್ಟರೆ ಒಳ್ಳೆಯದು.