K2kannadanews.in
lightning strikes ಲಿಂಗಸುಗೂರು : ಸಿಡಿಲು ಬಡಿದು ಲಕ್ಷಾಂತರ ರೂಪಾಯಿ ಮೌಲ್ಯದ ಪಪ್ಪಾಯ ಮತ್ತು ಮೆಣಸಿನಕಾಯಿ ಬೆಳೆ ಹಾಳಾಗಿರುವ ಘಟನೆ ಇತ್ತೀಚೆಗೆ ನಡೆದಿದ್ದು ಬೆಳೆ ಕಳೆದುಕೊಂಡ ರೈತ ಸರ್ಕಾರದಿಂದ ಪರಿಹಾರ ಯಾವಾಗ ಸಿಗುತ್ತದೆ ಎಂದು ಎದುರು ನೋಡುತ್ತಿದ್ದಾನೆ.
ಹೌದು ಇತ್ತೀಚೆಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಜಾಗೀರ ನಂದಿಹಾಳ ಗ್ರಾಮದಲ್ಲಿ ಗ್ರಾಮದ ರೈತ ಮಂಜುನಾಥ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸಿಡಿಲು ಬಡಿದು ಬೆಳೆಹಾನಿಯಾಗಿತ್ತು, 3 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ 1800 ಪಪ್ಪಾಯಿ ಗಿಡಗಳನ್ನು ರೈತ ಹಾಕಿದ್ದ. ಇದರಲ್ಲಿ ಸಿಡಿಲು ಬಡಿದು 250 ಗಿಡಗಳು ನಾಶವಾಗಿದ್ದವು. ಪಪ್ಪಾಯಿ ಬೆಳೆಗೆ 2 ಲಕ್ಷ 20 ಸಾವಿರ ಖರ್ಚು ಮಾಡಿದ್ದ ರೈತ, ಇದರಲ್ಲಿ ಒಂದುವರೆ ಲಕ್ಷ ರೂಪಾಯಿ ಖರ್ಚುಮಾಡಿ ಮೆಣಸಿನಕಾಯಿ ನಾಟಿ ಮಾಡಿದ್ದ. ಆದ್ರೆ ಸಿಡಿಲು ಬಡಿದು ಮೆಣಸಿನಕಾಯಿ ಬೆಳೆಯು ಸಹ ಹಾಳಾಗಿದೆ.
ಮಾಹಿತಿ ತಿಳಿದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿಯನ್ನು ಸಲ್ಲಿಸಿದ್ದರು, ಅಧಿಕಾರಿಗಳು ಸಲ್ಲಿಸಿದ ವರದಿ ಆಧಾರದ ಮೇಲೆ ನೀಡುವ ಪರಿಹಾರಕ್ಕಾಗಿ ರೈತ ಕಾಯುತ್ತಾ ಕುಳಿತಿದ್ದಾನೆ.