K2kannadanews.in
Crime News ಲಿಂಗಸೂಗೂರು : ದುಷ್ಕರ್ಮಿಗಳು ಗ್ರಾಮಕ್ಕೆ (Village) ಸರಬರಾಜು ಮಾಡುವ ಕುಡಿಯುವ ನೀರಿನ (Drinking water) ಓವರ್ ಹೆಡ್ ಟ್ಯಾಂಕಿನಲ್ಲಿ (Overhead tank) ವಿಷ ಬೆರೆಸಿದ್ದು, ಅನುಮಾನ ಕೊಂಡ ಕೆಲ ಗ್ರಾಮಸ್ಥರು ಪರಿಶೀಲಿಸಿದಾಗ ವಿಷ ಭೆರಿಸಿದ (Poison) ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಗ್ರಾಮಸ್ಥರಿಗೆ ನೀರು ಬಳಸಂತೆ ಎಚ್ಚರಿಕೆ ನೀಡಿದ ಕಾರಣ, ಬಾರಿ ಅನಾಹುತ ಒಂದು ತಪ್ಪಿದ ಘಟನೆ ತವಗ ಗ್ರಾಮದಲ್ಲಿ ಜರುಗಿದೆ.
ರಾಯಚೂರು (Raichur) ಜಿಲ್ಲೆಯ ಲಿಂಗಸಗೂರು (Lingasuguru) ತಾಲೂಕಿನ ರೋಡಲಬಂಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ, ತವಗ ಗ್ರಾಮದಲ್ಲಿ ಘಟನೆ ಜರುಗಿದೆ. ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕಿನಲ್ಲಿ ದುಷ್ಕರ್ಮಿಗಳು ವಿಷ ಬೆರೆಸಿದ್ದಾರೆ. ಗ್ರಾಮದ ವಾಟರ್ ಮ್ಯಾನ್ (Water man) ನೀರು ಬಿಟ್ಟ ಸಂದರ್ಭದಲ್ಲಿ ನಲ್ಲಿಗಳಲ್ಲಿ(Tap) ನೊರೆ ಮತ್ತು ದುರ್ವಾಸನೆಯಿಂದ (Foam and odor) ಕೂಡಿದ ನೀರು ಬಂದಿದೆ. ಈ ವೇಳೆ ಅನುಮಾನ ಗೊಂಡ ಗ್ರಾಮಸ್ಥರು ವಾಟರ್ ಮ್ಯಾನ್ ಆದಪ್ಪನಿಗೆ ಮಾಹಿತಿ ನೀಡಿದ್ದಾರೆ ನೋಡಿದಾಗ ಅಲ್ಲೂ ಕೂಡ ನೀರು ದುರ್ವಾಸನೆ ಮತ್ತು ನೊರೆಯಿಂದ ಕೂಡಿತ್ತು. ಕೂಡಲೇ ಎಚ್ಚೆತ ಆದಪ್ಪ ಗ್ರಾಮದಲ್ಲಿ ಯಾರು ನೀರು ಬಳಸದಂತೆ ಎಚ್ಚರಿಕೆ ನೀಡಿದ್ದಾನೆ.
ನಂತರ ಓವರಹೆಡ್ ಟ್ಯಾಂಕ್ ನಲ್ಲಿರುವ ನೀರು ಕಾಲಿ ಮಾಡಲು ಮುಂದಾದಾಗ, ಅಲ್ಲೂ ಕೂಡ ನೀರು ಸಾಕಷ್ಟು ನೊರೆಯಿಂದ ಬಂದ ವೇಳೆ ವಿಷ ಖಚಿತವಾಗಿದೆ. ಒಂದು ವೇಳೆ ನೀರನ್ನು ಕುಡಿದಿದ್ದರೆ ಗ್ರಾಮದಲ್ಲಿ ಸಾವು ನೋವುಗಳು ಸಂಭವಿಸಿ ಬಾರಿ ಅನಾಹುತವೇ ಜರಗುತ್ತಿತ್ತು. ಇದರಿಂದ ಅಸಮಾಧಾನ ಗೊಂಡ ಆದಪ್ಪ ಮತ್ತು ಗ್ರಾಮಸ್ಥರು ಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಕೂಡಲೇ ತನಿಖೆ ಮಾಡಿ ವಿಷ ಬೆರಿಸಿದವರು ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.