ಹಟ್ಟಿ ಚಿನ್ನದಗಣಿಯಲ್ಲಿ 5 ತಿಂಗಳಿಗೆ 597 ಕೆ.ಜಿ ಚಿನ್ನ ಉತ್ಪಾದನೆ..

K 2 Kannada News
ಹಟ್ಟಿ ಚಿನ್ನದಗಣಿಯಲ್ಲಿ 5 ತಿಂಗಳಿಗೆ 597 ಕೆ.ಜಿ ಚಿನ್ನ ಉತ್ಪಾದನೆ..
WhatsApp Group Join Now
Telegram Group Join Now

K2kannadanews.in

Hatti gold mine ಹಟ್ಟಿ : ದೇಶದ ಏಕೈಕ ಚಿನ್ನದ ಗಣಿ (Hatti Gold main) ಕಂಪನಿ ಇದೀಗ ಐತಿಹಾಸಿಕ (History) ಚಿನ್ನ ಉತ್ಪಾದನೆಯತ್ತ ದಾಪುಗಾಲು ಹಾಕುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ 5 ತಿಂಗಳಲ್ಲಿ (Month’s) ಹಟ್ಟಿ ಚಿನ್ನದಗಣಿ ಕಂಪನಿ 613.686 ಕೆಜಿ ಗುರಿ ಪೈಕಿ 597.772 ಕೆಜಿ ಚಿನ್ನ (KG gold) ಉತ್ಪಾದಿಸಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಇರುವ ಗಣಿಯಲ್ಲಿ ಚಿನ್ನ ಉತ್ಪಾದಿಸಲಾಗುತ್ತದೆ. ಪ್ರತಿ ಟನ್ ಅದಿರಿನಲ್ಲಿ 2.23 ಗ್ರಾಂ ಉತ್ಪಾದನೆ ಗುರಿ ಹೊಂದಿದ್ದು, 2.74 ಗ್ರಾಂ. ಹಳದಿ ಲೋಹ ಉತ್ಪಾದನೆಯಾಗಿದೆ. ಏಪ್ರಿಲ್‌ನಲ್ಲಿ (April) 118, ಮೇ 90 (May), ಜೂನ್ 110 (June), ಜುಲೈ 150 (July), ಅಗಸ್ಟ್‌ನಲ್ಲಿ 127 (August) ಕೆಜಿ ಚಿನ್ನ ಉತ್ಪಾದನೆಯಾಗಿದೆ. ಜುಲೈನಲ್ಲಿ 133 ಕೆ.ಜಿ ಚಿನ್ನ ಉತ್ಪಾದನೆ ಗುರಿ ಹೊಂದಲಾಗಿತ್ತು. ಕಳೆದ ವರ್ಷ ಮೊದಲ ಆರು ತಿಂಗಳಲ್ಲಿ ಯಾವ ತಿಂಗಳು ಕೂಡ ನೂರು ಕೆ.ಜಿ ಉತ್ಪಾದನೆ ದಾಟಿರಲಿಲ್ಲ. ಆರಂಭದಲ್ಲಿ ಚಿನ್ನದ ಉತ್ಪಾದನೆಯಲ್ಲಿ ಹಿನ್ನಡೆ ಕಂಡರು ಕೂಡಾ ವರ್ಷಾಂತ್ಯಕ್ಕೆ ಕಳೆದ ವರ್ಷದ ಲಾಭದ ದಾಖಲೆ ಮುರಿಯುವ ನಿರೀಕ್ಷೆ ಇದೆ.

WhatsApp Group Join Now
Telegram Group Join Now
Share This Article