K2kannadanews.in
land encroachment ಲಿಂಗಸೂಗೂರು : ಕಳೆದ ಒಂದು ವಾರದಿಂದ (last week) ಸದ್ದು ಮಾಡುತ್ತಿದ್ದ, ಆರ್ ಬಿ ಶುಗರ್ಸ್ (RB sugar) ಸರ್ಕಾರಿ ಭೂಮಿ (Land) ಒತ್ತುವರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ (Twest) ಸಿಕ್ಕಿದೆ. ಆರ್ ಬಿ ಶುಗರ್ಸ್ ತಮ್ಮ ಸ್ವಂತ ಸ್ಥಳದಲ್ಲೇ ಕಾಮಗಾರಿ (Work) ನಡೆಸಿದೆ ಎಂದು ತಹಶೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ.
ಹೌದು ರಾಯಚೂರು (Raichur) ಜಿಲ್ಲೆ ಲಿಂಗಸುಗೂರು (Lingasuguru) ತಹಶೀಲ್ದಾರ್ ಶಂಶಾಲಂ ರವರು ಸ್ಥಳ ಪರಿಶೀಲನೆ ಬಳಿಕ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರಿ ಅಥವಾ ಅರಣ್ಯದ ಯಾವುದೇ ಭೂಮಿ ಒತ್ತುವರಿಯಾಗಿಲ್ಲ. ಸುಣಕಲ್ ಸೀಮಾಂತರ ಸರ್ವೇ ನಂಬರ್ 77 ಹಾಗೂ 78 ರಲ್ಲಿಯೇ ಕಾಮಗಾರಿ ನಡೆದಿದೆ. ಸರ್ವೇ ನಂಬರ್ 77 ಹಾಗೂ 78 ರಲ್ಲಿ 22 ಎಕರೆ ಆರ್ ಬಿ ಶುಗರ್ಸ್ ಅವರದ್ದು ಎಂದು ತಹಶೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ.
ಸಚಿವ ಆರ್ ಬಿ ತಿಮ್ಮಾಪುರ ಒಡೆತನದ ಆರ್ ಬಿ ಶುಗರ್ಸ್ ಲಿಂಗಸುಗೂರು ತಾಲೂಕಿನ ಸುಣಕಲ್ ಗ್ರಾಮದ ಹೊರವಲಯದಲ್ಲಿ ಶುಗರ್ ಫ್ಯಾಕ್ಟರಿ ಕಾಮಗಾರಿ ನಡೆದಿದೆ. ಕಳೆದೊಂದು ವಾರದಿಂದ ಸದ್ದು ಮಾಡುತ್ತಿದ್ದ ಅರಣ್ಯ ಹಾಗೂ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣಕ್ಕೆ ಸದ್ಯ ತಹಶೀಲ್ದಾರರಿಂದ ಸ್ಪಷ್ಟನೆ, ಸಿಕ್ಕಿದ್ದು, ಯಾವುದೇ ಒತ್ತುವರಿ ಇಲ್ಲ ಎಂದು ಹೇಳಿದ್ದಾರೆ.