ಚೊಚ್ಚಲ ಟಿ20 ವಿಶ್ವಕಪ್‌ ಇಂಡೋ-ಪಾಕ್ ರೋಚಕ ಪಂದ್ಯದ ಕೊನೇಕ್ಷಣ..

K 2 Kannada News
ಚೊಚ್ಚಲ ಟಿ20 ವಿಶ್ವಕಪ್‌ ಇಂಡೋ-ಪಾಕ್ ರೋಚಕ ಪಂದ್ಯದ ಕೊನೇಕ್ಷಣ..
WhatsApp Group Join Now
Telegram Group Join Now

K2kannadanews.in

IND vs PAK ಸ್ಪೋರ್ಟ್ಸ್ ನ್ಯೂಸ್ : ದಕ್ಷಿಣ ಆಫ್ರಿಕಾ (south Africa) ಆತಿಥ್ಯದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ (T20 world cup) ಟೂರ್ನಿಯ ಕೊನೆ ಪಂದ್ಯಲ್ಲಿ ಭಾರತ (India) ಇತಿಹಾಸ ಸೃಷ್ಟಿಸಿತ್ತು (Create history). ಮೊದಲ ಪ್ರಯತ್ನದಲ್ಲೇ ಭಾರತ ತಂಡ ವಿಶ್ವಕಪ್‌ ಗೆದ್ದಿತ್ತು. ಕೊನೆ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ(IND vs PAK)ವನ್ನು  ಓಲಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು.

ಅಂದಿನ ಪಂದ್ಯ ಕೊನೇ ಬಾಲ್ ವರೆಗೂ ನಡೆದು ಎರಡೂಗಳ ನಡುವಣ ಲೀಗ್‌ ಪಂದ್ಯ ಟೈಆಗಿತ್ತು. ಆಗಲೇ ಅಮಪಯರ್ ಗಳು  ಬೌಲ್‌ ಔಟ್‌(IND vs PAK ‘Bowl-Out’) ನಡೆಸಲು ನಿರ್ಧರಿಸಲಾಗಿತ್ತು. ಈ ಬೌಲ್‌ ಔಟ್‌ ಘಟನೆಗೆ ಈಗ ಬರೋಬ್ಬರಿ 17 ವರ್ಷ ತುಂಬಿದೆ. ಅಂದಿನ ಈ ಟಿ20 ವಿಶ್ವಕಪ್‌ ವೇಳೆ ಪಂದ್ಯ ಟೈ ಆದಾಗ ಸೂಪರ್‌ ಓವರ್‌ ನಿಯಮ ಇರಲಿಲ್ಲ. ಅದೇನೂ ಕಾಕತಾಳೀಯವೋ, ಭಾರತ-ಪಾಕಿಸ್ತಾನ ನಡುವೆ ಡರ್ಬನ್‌ನಲ್ಲಿ ನಡೆದ ಲೀಗ್‌ ಪಂದ್ಯವೇ ಟೈ ಆಯಿತು.

ಭಾರತ 9ಕ್ಕೆ 141 ರನ್‌ ಬಾರಿಸಿದರೆ, ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೂಡ 7ವಿಕೆಟ್‌ ಕಳೆದುಕೊಂಡು 141 ರನ್‌ ಮಾಡಿತ್ತು. ಪಂದ್ಯ ಟೈ ಗೊಂಡಿತು.ಆಗ ಟೈ ಬ್ರೇಕರ್‌ಗಾಗಿ ಅಳವಡಿಸಿದ್ದು ಬಾಲ್‌ ಔಟ್‌ ನಿಯಮ ಹೇರಲಾಯಿತು. ಅಂದರೆ, ಬ್ಯಾಟಿಂಗ್‌ ಎಂಡ್‌ನ‌ಲ್ಲಿರುವ ಸ್ಟಂಪ್‌ಗೆ ಬೌಲರ್‌ ಚೆಂಡೆಸೆಯುವುದು. ಅಲ್ಲಿ ಬ್ಯಾಟರ್‌ ನಿಂತಿರುವುದಿಲ್ಲ. ಚೆಂಡು ಸ್ಟಂಪ್‌ಗೆ ತಗಲಬೇಕಿತ್ತು.  ಆಗ ಭಾರತ 3-0 ಅಂತರದ ಮೇಲುಗೈ ಸಾಧಿಸಿತು. ಭಾರತದ ಮೂವರೂ ಎಸೆದ ಚೆಂಡು ಸ್ಟಂಪ್‌ಗೆ ಹೋಗಿ ಬಡಿದಿತ್ತು. ಪಾಕಿಸ್ತಾನದ ಮೂರೂ ಎಸೆತಗಳು ಗುರಿ ತಪ್ಪಿದವು.

WhatsApp Group Join Now
Telegram Group Join Now
Share This Article