K2kannadanews.in
leopard attack ಲಿಂಗಸುಗೂರು : ಚಿರತೆಯೊಂದು ಆಕಳು (Cow) ಕರುವಿನ (calf) ಮೇಲೆ ದಾಳಿ ಮಾಡಿ ಕೊಂದು (kill)ಹಾಕಿದ ಘಟನೆ ಗದ್ದಿಗಿ ಗ್ರಾಮದಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆ ಲಿಂಗಸೂಗೂರು (Lingasuguru) ತಾಲ್ಲೂಕಿನ ಗದ್ದಿಗಿ ಗ್ರಾಮದ ಹನುಮಂತ ಪೂಜಾರಿ ಎಂಬುವರಿಗೆ ಸೇರಿದ ಆಕಳ ಕರುವೊಂದು ಬಲಿಯಾಗಿದೆ. ಗುರುಗುಂಟಾ (Gurugunta) ಹೋಬಳಿ ವ್ಯಾಪ್ತಿಯ ಪೈದೊಡ್ಡಿ, ಗದ್ದಗಿ ಗ್ರಾಮದಲ್ಲಿ ಆಗಾಗ ಚಿರತೆ ಪ್ರತಕ್ಷವಾಗಿ ದನಕರುಗಳ ಮೇಲೆ ದಾಳಿ (Attack) ನಡೆಸಿ ಭಕ್ಷಿಸುತ್ತಿದೆ. ಇದರಿಂದ ಸುತ್ತಲಿನ ಗ್ರಾಮಗಳ ಜನರಲ್ಲಿ ಭಯ ಮೂಡಿಸಿದೆ.
ಇತ್ತೀಚೆಗೆ ಪೈದೊಡ್ಡಿ ಗ್ರಾಮ ಸೇರಿ ಕೆಲವು ಕಡೆ ಚಿರತೆ ಕಂಡಾಗ, ಅದನ್ನು ಹಿಡಿಯಲು ಅರಣ್ಯಾಧಿಕಾರಿಗಳು ಬೋನುಗಳನ್ನು ಇರಿಸಿದ್ದಾರೆ. ಆದರೆ ಇವರೆಗೂ ಚಿರತೆ ಬೋನಿಗೆ ಬಿದ್ದಿಲ್ಲ. ಕೆಲ ದಿನಗಳ ಹಿಂದಷ್ಟೆ ಒಂದು ಆಕಳನ್ನು ಕೊಂದು ಹಾಕಿತ್ತು. ಭಾನುವಾರ ಸಂಜೆ ಕರುವನ್ನು ಬಲಿ ಪಡೆದಿದೆ. ಆದಷ್ಟು ಬೇಗ ಚಿರತೆ ಹಿಡಿದು ಬೇರೆಡೆ ಸ್ಧಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಂಜೆಯಾದರೆ ಗ್ರಾಮಸ್ಥರು ಮನೆ ಬಿಟ್ಟು ಹೊರ ಬರದಂತಾಗಿದೆ. ಜಮೀನಿಗೆ ಹೋಗಲು ಜನರು ಹಿಂಜರಿಯುತ್ತಿದ್ದಾರೆ. ಕೂಲಿ ಕೆಲಸಕ್ಕೆ ಹೋಗಲು ಭಯ ಪಡುವ ಸ್ಧಿತಿ ಎದುರಾಗಿದೆ. ಜನರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಬಂದು ಹೋಗುತ್ತಿದ್ದಾರೆ. ಚಿರತೆ ಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.