K2kannadanews.in
T20 world cup ರಾಯಚೂರು : ಟಿ20 ವಿಶ್ವಕಪ್ ಹೈವೋಲ್ಟೇಜ್ ಭಾರತ ಪಾಕಿಸ್ಥಾನ ಮ್ಯಾಚ್ ಇಂದು ನಡೆಯುತ್ತಿದೆ. ಭಾರತ ತಂಡದ ಗೆಲುವಿಗೆ ಮಕ್ಕಳಿಂದ ಶಿವನಿಗೆ ವಿಶೇಷ ಪೂಜೆ ನಡೆಸಿದ್ದಾರೆ.
ಹೌದು ರಾಯಚೂರು ನಗರದ ಎನ್ ಐ ಜಿ ಕಾಲೋನಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಮಕ್ಕಳ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ಟಿ ಟ್ವೆಂಟಿ ವಿಶ್ವಕಪ್ ಗೆಲುವಿಗೆ ಮಕ್ಕಳಿಂದ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದಲ್ಲಿ ಬ್ಯಾಟ್ ಹಾಗೂ ಬಾಲ್ ಗಳನ್ನು ಇಟ್ಟು ಶಿವನಿಗೆ ಆರತಿ ಬೆಳಗುವ ಮೂಲಕ ಭಾರತ ತಂಡಕ್ಕೆ ಮಕ್ಕಳ ಶುಭ ಹಾರೈಸಿದರು. ಇಂಡಿಯಾ ಈ ಪಂದ್ಯವನ್ನು 100% ಗೆಲ್ಲುತ್ತದೆ ಎಂದ ಮಕ್ಕಳು, ನೆಚ್ಚಿನ ಪ್ಲೇಯರ್ಸ್ ಹಾಗೂ ಟೀಮ್ ಗೆ ವಿಶ್ ಮಾಡಿದರು.