K2kannadanews.in
Mantralaya ರಾಯಚೂರು : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಒಂದು ತಿಂಗಳ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು ದಾಖಲೆಯ 3.69 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹುಂಡಿಯನ್ನು ಸೋಮವವಾರ ತೆರೆದು ನಗದು ಎಣಿಕೆ ಮಾಡಲಾಗಿದ್ದು, 32 ದಿನಗಳ ಅವಧಿಯಲ್ಲಿ 3.69 ಕೋಟಿ ನಗದು ಕಾಣಿಕೆಯಾಗಿ ಬಂದಿದೆ. 3,61,21,649 ನಗದು, 8,13,540 ನಾಣ್ಯಗಳು ಸೇರಿ ಒಟ್ಟು 3,69,35,189 ನಗದು, ಚಿನ್ನದ ಹಾಗೂ ಬೆಳ್ಳಿಯ ವಸ್ತುಗಳ ಭಕ್ತರಿಂದ ಕಾಣಿಕೆ ರೂಪದಲ್ಲಿ ಬಂದಿದ್ದು, ಮಠದ ನಿಯಮ ಪ್ರಕಾರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.