K2Kannadanews.in
Local News ರಾಯಚೂರು : YTPS ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಮೂರನೇ ವ್ಯಕ್ತಿಗೆ ವ್ಯಾಗನ್ ಕ್ಲೀನಿಂಗ್ (Cleaning) ಟೆಂಡರ್ ನೀಡುವ ಮೂಲಕ, ಅಕ್ರಮ ಕಲ್ಲಿದ್ದಲು(Coal) ಸಾಗಾಟ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ರಾಯಚೂರು (Raichur) ತಾಲ್ಲೂಕಿನ ಯರಮರಸ್ (Yaramaras) ಬಳಿ ಇರುವ ಯರಮರಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಬೆಲೆ ಬಾಳುವ, ಕಪ್ಪು ಬಂಗಾರ (Black Gold) ಕಲ್ಲಿದ್ದಲು ಅಕ್ರಮವಾಗಿ ಖಾಸಗಿ ಪಾಲಾಗುತ್ತಿದೆ ಎಂದು ಸ್ಥಳಿಯರು ಆರೋಪ ಮಾಡುತ್ತಿದ್ದಾರೆ. ಸರಕಾರ ಕೊಟ್ಯಾಂತರ ವೆಚ್ಚದಲ್ಲಿ ಕಲ್ಲಿದ್ದಲು ಖರೀದಿ ಮಾಡಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಆದ್ರೆ ಅಧಿಕಾರಿಗಳು ಅದೇ ಕಲ್ಲಿದ್ದಲನ್ನು ಅಕ್ರಮವಾಗಿ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಿಸಲಾಗುತ್ತಿದೆ.
ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಎರಡು ವ್ಯಾಗನ್ ಕ್ಲೀನರ್ ಯುನಿಟ್ ಇದ್ದರೂ ಮೂರನೆ ವ್ಯಕ್ತಿಗೆ ಟೆಂಡರ್ ನೀಡಲಾಗಿದೆ. ಕಲ್ಲಿದ್ದಲು ಹೊತ್ತು ಬರುವ ಟ್ರೇನ್ ವ್ಯಾಗನ್ ಸರಿಯಾಗಿ ಖಾಲಿ ಮಾಡದೆ ಹೊರಗೆ ತರಲಾಗುತ್ತಿದೆ, ಅದನ್ನು ಅನಧಿಕೃತವಾಗಿ ಯರಮರಸ್ ರೈಲು ನಿಲ್ದಾಣದಲ್ಲಿ ಅಲ್ಲಿಂದ ಉಳಿಸಿಕೊಂಡು ಬಂದು ಬೃಹತ್ ಟಿಪ್ಪರ್ ಗಳಲ್ಲಿ ಕಲ್ಲಿದ್ದಲು ಸಾಗಾಟ ಮಾಡಲಾಗುತ್ತಿದೆ. ಇದರಿಂದ ಕಲ್ಲಿದ್ದಲು ಶಾಟೆಜ್ ನಿಂದ ಲೋಡ್ ಶೆಡ್ಡಿಂಗ್ ತೋರಿಸಲಾಗ್ತಿದೆ ಎಂದು ಆರೋಪಿಸಿದರು. ಅಕ್ರಮ ಕಲ್ಲಿದ್ದಲು ಸಾಗಾಟ ನಿಲ್ಲಿಸಿದರೆ ಅದೇಕಲ್ಲಿದ್ದಲು ವಿದ್ಯುತ್ ಉತ್ಪಾದನೆಗೆ ಅನುಕೂಲವಾಗಲಿದೆ. ಹಾಗಾಗಿ ಕಲ್ಲಿದ್ದಲು ದುರ್ಬಳಕೆ ತಡೆದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೈಗೊಳ್ಳಲು ಸ್ಥಳಿಯರಾದ ಶಿವಕುಮಾರ್ ಪಾಟೀಲ್ ಆಗ್ರಹಿಸಿದರು.