ಕಲ್ಮಲಾ ಗ್ರಾಮದಲ್ಲಿ ಯುವಕರು AAPಗೆ ಸೇರ್ಪಡೆಯಾದರು
![]() |
![]() |
![]() |
![]() |
![]() |
ರಾಯಚೂರು : ತಾಲೂಕಿನ ಕಲ್ಮಲಾ ಗ್ರಾಮದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ರೈತರು ಬೆಂಬಲಿಸಿದರು. ಪಕ್ಷದ ಆಕಾಂಕ್ಷಿ ಡಾ.ಸುಭಾಷಚಂದ್ರ ಸಂಬಾಜಿ ಅವರ ಸಮ್ಮುಖದಲ್ಲಿ ನೂರಾರು ಯುವಕರು ಎ.ಎ.ಪಿ ಗೆ ಸೇರ್ಪಡೆಗೊಂಡರು.
ಕಲ್ಮಲಾ ಗ್ರಾಮದಲ್ಲಿ ಪಕ್ಷದ ವತಿಯಿಂದ ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮದ ರೈತರು ಸ್ವಯಂ ಪ್ರೇರಿತರಾಗಿ ಬಂದು ಪಕ್ಷದ ಸಿದ್ಧಾಂತ ಬಗ್ಗೆ ಮೆಚ್ಚಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡರು
ಕಾಂಗ್ರೆಸ್ ಬಿಜೆಪಿ ,ಜೆಡಿಎಸ್ ಪಕ್ಷ ತೊರೆದು ನೂರಾರು ಯುವಕರು ಯಜಮಾನರು ಮಹಿಳೆಯರು ಪಕ್ಷದ ಸಿದ್ಧಾಂತಗಳನ್ನು ಮನಸಾರೆ ಮೆಚ್ಚಿ ನೂರಾರು ಯುವಕರು ಎ.ಎ.ಪಿ ಗೆ ಸೇರ್ಪಡೆಗೊಂಡರು.
ಡಾ. ಸುಭಾಷಚಂದ್ರ ಅವರು ಮಾತನಾಡಿ ಪಂಜಾಬ್ ಗಳಲ್ಲಿ ಎ.ಎ.ಪಿ ಸರ್ಕಾರದಿಂದ ಹತ್ತು ಹಲವು ಉಚಿತ ಸೌಲಭ್ಯಗಳನ್ನು ಉಚಿತವಾಗಿ ಕೊಡಲಾಗುತ್ತದೆ ಅಲ್ಲಿನ ಜನರು ಪಡೆದಂತೆ ಕರ್ನಾಟಕದ ಜನತೆ ಎ.ಎ.ಪಿ ಸರ್ಕಾರವನ್ನು ತಂದು ಸೌಲಭ್ಯಗಳನ್ನು ಪಡೆಯಿರಿ ಎಂದು ಮನವಿ ಮಾಡಿದರು.
![]() |
![]() |
![]() |
![]() |
![]() |