ಅಪ್ಪನಿಗೇ ಹುಟ್ಟಿದ್ರೆ CD ಬಿಡುಗಡೆ ಮಾಡಿ ಯತ್ನಾಳ್ V/S ನಿರಾಣಿ
![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್ : ಚುನಾವಣೆ ವರ್ಷಗಳು ಆರಂಭವಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ರಾಜ್ಯಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗುತ್ತಿವೆ. ಇನ್ನು ಯತ್ನಾಳ್ ಮತ್ತು ನಿರಾಣಿ ಅವರ ಮಧ್ಯದ ವಾಕ್ ಸಮರವು ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಮುರುಗೇಶ ನಿರಾಣಿ ನಡುವಿನ ವಾಕ್ ಸಮರ ಜೋರಾಗಿದ್ದು, ಇದೀಗ ನಿರಾಣಿ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಸಿಡಿ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿರುವ ಯತ್ನಾಳ್ ಮುರುಗೇಶ್ ನಿರಾಣಿ ಅವರಪ್ಪನಿಗೇ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡಲಿ. ಮೀಸಲಾತಿ ವಿಚಾರವನ್ನ ನಿರಾಣಿ ಅಧಿಕಾರಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ಆದರೆ ನಾನು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇನೆ ಎಂದು ಗುಡುಗಿದ್ದಾರೆ.
![]() |
![]() |
![]() |
![]() |
![]() |