This is the title of the web page
This is the title of the web page
Local News

ಮಾವು ಬೆಳೆದ ರೈತರಲ್ಲಿ ಆತಂಕ : ಹತೋಟಿಗೆ ಬಾರದ ಬೂದು, ಜಿಗಿ ರೋಗ


ರಾಯಚೂರು : ತಾಲೂಕಿನ ನಾವು ಬೆಳೆದ ರೈತ ಈ ಬಾರಿ ಉತ್ತಮ ಫಸಲ್ನೊಂದಿಗೆ ಹೆಚ್ಚಿನ ಲಾಭ ಪಡೆಯುವ ಕನಸು ಕಂಡಿತ ಆದರೆ ರೈತನ ಕನಸಿಗೆ ಉದುರೋಗ ಜಿಗಿರೋಗ ತಣ್ಣೀರು ಎರಚಿದೆ. ರೋಗ ನಿಯಂತ್ರಣಕ್ಕೆ ರೈತರು ಅರಸ ಅರಸ ಪಡುತ್ತಿದ್ದಾರೆ ಆದರೂ ಹತೋಟಿಗೆ ಬರುತ್ತಿಲ್ಲ ರೋಗ ಇದರಿಂದ ಇಳುವರಿ ಕುಂಠಿತಗೊಳ್ಳುವ ಆತಂಕದಲ್ಲಿ ರೈತರಿದ್ದಾರೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಸುಮಾರು 1,402ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಕಳೆದ ವರ್ಷದ ಡಿಸೆಂಬರ್ ಕೊನೆಯ ವಾರದಲ್ಲಿ ಹೂ ಬಿಡುವ ಸಮಯವಾಗಿತ್ತು. ಈಗ ಕೀಟಬಾಧೆ , ಬೂದು , ಜಿಗಿ ರೋಗದಿಂದ ಈ ವರ್ಷ ಸರಿಯಾಗಿ ಹೂ ಮತ್ತು ಕಾಯಿ ಬಿಡದಿರುವುದು ರೈತರ ಅನುಮಾನಕ್ಕೆ ಕಾರಣವಾಗಿದೆ. ಇದರಿಂದ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ ರೈತರ ಗೋಳು ಹೇಳ ತೀರದಾಗಿದೆ.

ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳ ಮೇಲೆ ಅವಲಂಬಿತರಾಗಿದ್ದು ಇತ್ತೀಚಿನ ದಿನಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಫಲವತ್ತಾದ ಭೂಮಿ ಭೂಸ್ವಾಧೀನಕ್ಕೆ ಒಳಪಡುತ್ತಿದೆ. ಹೂವಿನ ಜೊತೆ ಚಿಗುರು ಬಂದಿರುವುದರಿಂದ ಮರದ ಸಾರವನ್ನು ಚಿಗುರೇ ಹೆಚ್ಚಾಗಿ ಬಳಸಿಕೊಳ್ಳುವುದರಿಂದ ಹೂವಿಗೆ ಕಾಯಿ ಹಿಡಿಯುವಷ್ಟು ಶಕ್ತಿ ಕಡಿಮೆಯಾಗಿ ಹೂ ಉದುರುತ್ತಿದೆ. ಜೊತೆಗೆ ಚಿಗುರಿನಲ್ಲಿ ಜಿಗಿ ಹುಳ ಕಾಟವು ಹೆಚ್ಚಾಗಿ ಫಸಲು ಕಡಿಮೆಯಾಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ರಾಯಚೂರು ತಾಲೂಕಿನ ಚಂದ್ರಬಡಾ ಹೋಬಳಿ ಮತ್ತು ಗಿಲ್ಲೇಸೂಗೂರು ಹೋಬಳಿ ಸೇರಿ ತುಂಗೆ ದಂಡೆಯ ಗ್ರಾಮಗಳಲ್ಲಿ ಮಾವಿನ ತಳಿಗಳಾದ ಬಾದಾಮಿ ಮತ್ತು ಬೆನೀಷಾ ಮರಗಳಲ್ಲಿ ಹೆಚ್ಚಾಗಿ ಹೂವಿನ ಜೊತೆ ಚಿಗುರು ಕಾಣಿಸಿಕೊಳ್ಳುತ್ತದೆ. ಮಾವಿನ ಚಿಗುರು ಒಡೆಯುತ್ತಿರುವುದರಿಂದ ಜಿಗಿಹುಳು ಸೇರಿ ನಾನಾ ಜಾತಿಯ ಕೀಟಗಳು ಮರಗಳಲ್ಲಿ ಸೇರಿಕೊಂಡು ಚಿಗುರು ತಿನ್ನಲು ಆರಂಭಿಸುತ್ತಿವೆ. ಇದು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಅಂಟು ರೋಗವು ಸಹ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಶೇಕಡಾ 50 ರಷ್ಟು ಹೂವು ಕಾಣಿಸಿಕೊಂಡಿದ್ದು ಹಂತ ಹಂತವಾಗಿ ಮರಗಳಲ್ಲಿ ಹೂವು ಬಿಡುತ್ತಿದೆ ಎಂದು ರೈತರು ಹೇಳಿದ್ದಾರೆ.


[ays_poll id=3]