This is the title of the web page
This is the title of the web page
National News

ಕೊರೋನಾ ಲಸಿಕೆಯಿಂದ ಸೈಡ್ ಎಫೆಕ್ಟ್ ಹೆಚ್ಚಿದ ಆತಂಕ


K2 ನ್ಯೂಸ್ ಡೆಸ್ಕ್ : ಎರಡು ವರ್ಷಗಳ ಕಾಲ ಪ್ರಪಂಚವನ್ನೇ ಕಾಡಿರುವ ಕೊರೊನಾ ವೈರಸ್, ಇನ್ನು ಕೆಲ ದೇಶಗಳಲ್ಲಿ ಕಾಡುತ್ತಲೇ ಇದೆ. ಭಾರತದಲ್ಲಿ ಪ್ರಸ್ತುತ ಕರೋನ ಆರ್ಭಟ ಇಲ್ಲದಿದ್ದರೂ ಅದರ ಸೈಡ್ ಎಫೆಕ್ಟ್ ಭಾರಿ ಸದ್ದು ಮಾಡುತ್ತಿದೆ. ಕರುಣ ಬೇಡಿ ಚಿಕಿತ್ಸೆ ಪಡೆದವರಿಗೆ ಇದೀಗ ಸೈಡ್ ಎಫೆಕ್ಟ್ ಆರಂಭವಾಗಿದೆ ಎಂದು ಸ್ವತಃ ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದೆ.

ಕೊರೋನಾ ಲಸಿಕೆ ಪಡೆದವರಲ್ಲಿ ಸೈಡ್ ಎಫೆಕ್ಟ್‌ ಕಾಣಿಸಿಕೊಂಡಿವೆ ಎಂಬ ಆಘಾತಕಾರಿ ಅಂಶವನ್ನು ಕೇಂದ್ರ ಸರ್ಕಾರವು ಬಹಿರಂಗಪಡಿಸಿದೆ. ಪುಣೆಯ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಐಸಿಎಂಆರ್ ಉತ್ತರಿಸಿದೆ. ಅದರಲ್ಲಿ ಲಸಿಕೆಗಳನ್ನು ತೆಗೆದುಕೊಂಡವರಿಗೆ ಎದೆನೋವು, ನೆಗಡಿ, ವಾಂತಿ, ಕಣ್ಣು ನೋವು, ತಲೆನೋವು, ಉಸಿರಾಟದ ತೊಂದರೆ ಮುಂತಾದ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿವೆ ಎಂದಿದೆ. ದೇಶಾದ್ಯಂತ ಈವರೆಗೆ 220 ಕೋಟಿಗೂ ಹೆಚ್ಚು ಕೊರೋನಾ ಡೋಸ್ ನೀಡಲಾಗಿದೆ. ವರದಿಯಿಂದ ಸಾರ್ವಜನಿಕ ಭರದಲ್ಲಿ ಒಂದಷ್ಟು ಆತಂಕ ಹೆಚ್ಚಿದೆ.


[ays_poll id=3]