
ಲಿಂಗಸುಗೂರು: ವಾತಾವರಣದ ವೈಪರಿತ್ಯ ಇದೀಗ ಕಡಲೆ, ಶೇಂಗಾ ಬೆಳೆಗಾರರನ್ನು ಸಂಕಷ್ಟಕ್ಕೆ ಸಲುಕಿಸುತ್ತಿದೆ. ಕಡಲೆ ಬೆಳೆಗೆ ಹಸಿರು, ಕಂದು ಬಣ್ಣದ ಹುಳು ಕಾಟ ಹೆಚ್ಚಾಗಿದ್ದು, ರೈತರನ್ನು ಕಂಗಾಲಾಗಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ, ಗುರುಗುಂಟಾ, ಕೋಠಾ, ಮೇದಿನಾಪುರ, ಮಾಚನೂರು, ಗೌಡೂರು, ನಿಲೋಗಲ್, ಆನ್ವರಿ, ಯಲಗಟ್ಟಾ ಗ್ರಾಮಗಳಲ್ಲಿ ಅತಿ ಹೆಚ್ಚಾಗಿ ಕಡಲೆ ಬೆಳೆಯಲಾಗಿದೆ.ಆದರೆ ಕಾಳು ಕಟ್ಟುವ ಮೊದಲೇ ಹಸಿರು ಹುಳು ಕಾಯಿಯನ್ನು ತಿಂದು ಹಾಕುತ್ತಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನುತ್ತಾರೆ ರೋಡಲಬಂಡ ಗ್ರಾಮದ ರೈತರು.
ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಯಾವುದೇ ಮಾಹಿತಿ ಒದಗಿಸುತ್ತಿಲ್ಲ. ಹಸಿರು ಹುಳುವನ್ನು ಹತೋಟಿಗೆ ತರಲು ಯಾವ ಔಷಧ ಸಿಂಪಡಣೆ ಮಾಡಬೇಕು ಎಂಬುದು ಗೊಂದಲ ಉಂಟಾಗಿದ್ದು, ಸಮಸ್ಯೆಯನ್ನು ಆಲಿಸಬೇಕಾದ ರೈತ ಸಂಕರ್ಪ ಕೇಂದ್ರದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ರೈತರ ಆರೋಪ.
ಇತ್ತ ಗುರುಗುಂಟಾ, ಪೈದೊಡ್ಡಿ, ಯರಜಂತಿ, ಪೂಲಭಾವಿ, ಟಣಮಕಲ್ಲು, ಗದಗಿ ಸೇರಿದಂತೆ ಇತರ ಗ್ರಾಮಗಳಲ್ಲಿ ನೀರಾವರಿ ಭೂಮಿ ಇರುವ ರೈತರು ಶೇಂಗಾ ಬೆಳೆಯನ್ನು ಬೆಳೆದಿದ್ದಾರೆ. ಆದರೆ, ಹೂ ಬಿಡುವ ಮೊದಲೇ ಎಲೆಗಳಿಗೆ ಕರಿ ಬಣ್ಣದ ಉದ್ದನೆಯ ಡೊಂಕು ಹುಳು ಕಾಟ ಹೆಚ್ಚಾಗಿದೆ. ಗಿಡದ ಎಲೆಯನ್ನು ತಿಂದು ಹಾಕುತ್ತಿದ್ದು, ಇದರಿಂದ ಬೆಳೆಗಳು ಕುಂಠಿತವಾಗಿವೆ ಎಂದು ರೈತರು ತಿಳಿಸಿದರು.
![]() |
![]() |
![]() |
![]() |
![]() |
[ays_poll id=3]