This is the title of the web page
This is the title of the web page
National News

ಸೌರಮಂಡಲದಲ್ಲಿ ಜರುಗಲಿದೆ ವಿಸ್ಮಯ


K2 ನ್ಯೂಸ್ ಡೆಸ್ಕ್: ಫೆ.1, 2ರಂದು ಹಸಿರು ಧೂಮಕೇತು ಭೂಮಿಯ ಸಮೀಪಕ್ಕೆ ಬರಲಿದ್ದು, ಬೆಳಗಿನ ಜಾವ ಬರಿಗಣ್ಣಿನಲ್ಲಿ ನೋಡಬಹುದು ಎಂದು ತಜ್ಞರು ಹೇಳಿದ್ದಾರೆ.

ಸೌರವ್ಯೂಹದ ಆಚೆಗೆ ಇರುವ ಊರ್ತ್‌ ಕೌಡ್‌ನಿಂದ ಹೊರಬಂದು ಭೂಮಿಯ ಹತ್ತಿರಕ್ಕೆ ಬರುವ ಬಹು ಅಪರೂಪದ ಹಸಿರು ಧೂಮಕೇತುವನ್ನು ಫೆಬ್ರವರಿ 1, 2 ರಂದು ಬರಿಗಣ್ಣಿನಿಂದ ವೀಕ್ಷಿಸಬಹುದು. ಈ ವಿಸ್ಮಯ 50 ಸಾವಿರ ವರ್ಷಗಳಿಗೆ ಒಮ್ಮೆ ಮಾತ್ರ ಸಂಭವಿಸುತ್ತದೆ. ಉತ್ತರ ದಿಕ್ಕಿನ ಡ್ರಾಕೋ ನಕ್ಷತ್ರ ಪುಂಜದ ಸಮೀಪ ಇದು ಹಾದು ಹೋಗಲಿದೆ. ಭೂಮಿಯಿಂದ ಈ ಧೂಮಕೇತು 16 ಕೋಟಿ ಕಿ.ಮೀ ದೂರವಿದ್ದರೂ, ಈ ಎರಡು ದಿನಗಳಲ್ಲಿ ಅದು 4 ಕೋಟಿ 20 ಲಕ್ಷ ಕಿ.ಮೀ ಸಮೀಪಕ್ಕೆ ಬರಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ಸುಮಾರು 50 ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ಭೂಮಿಯ ಸಮೀಪಕ್ಕೆ ಬಂದಿದ್ದ ಧೂಮಕೇತು ಈಗ ಮತ್ತೆ ಅತಿ ಸಮೀಪಕ್ಕೆ ಬರುತ್ತದೆ. ಉತ್ತರ ದಿಕ್ಕಿನ ಡ್ರಾಕೊ ನಕ್ಷತ್ರಪುಂಜದ ಸಮೀಪ ಧೂಮಕೇತುವನ್ನು ಬೈನಾಕ್ಯುಲರ್, ದೂರದರ್ಶಕ, ಬರಿಗಣ್ಣಿನಲ್ಲಿಯೂ ನೋಡಬಹುದು.


[ays_poll id=3]