ಸ್ತ್ರೀ ಸಾಮರ್ಥ್ಯ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕು: ಮುಖ್ಯಮಂತ್ರಿ
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ಕರ ಕುಶಲತೆ ನಮ್ಮ ಭಾರತೀಯ ನಾರಿಯರಿಗೆ ದೇವರು ಕೊಟ್ಟ ವರ. ಬೇರೆ ಯಾವುದೇ ದೇಶದ ಮಹಿಳೆಯರಿಗೆ ಈ ಕಲೆ ಕೊಟ್ಟಿಲ್ಲ. ಮುಂದಿನ ವರ್ಷದಿಂದ ರಾಜ್ಯದ 5 ಕಡೆ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಶಾಶ್ವತ ವಸ್ತು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ ಈ ಉತ್ಪನ್ನಗಳಿಗೆ ಆನ್ಲೈನ್ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡುತ್ತೇವೆ. ಸ್ತ್ರೀ ಸಾಮರ್ಥ್ಯ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಸ್ತ್ರೀ ಸಾಮರ್ಥ್ಯ ಅನ್ನುವ ಯೋಜನೆ ಜಾರಿ ಮಾಡಿದ್ದೇವೆ. ಸ್ತ್ರೀ ಸಾಮರ್ಥ್ಯ ಯೋಜನೆ ಅನುಷ್ಠಾನಕ್ಕಾಗಿ ಬಜೆಟ್ ನಲ್ಲಿ ರೂ.1000 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಯೋಜನೆಯಿಂದ ರಾಜ್ಯದ 33 ಸಾವಿರ ಮಹಿಳಾ ಸಂಘದ 5 ಲಕ್ಷ ಮಹಿಳೆಯರಿಗೆ ಲಾಭವಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಿಂದ ದೇಶದಲ್ಲಿ ದೊಡ್ಡ ಕ್ರಾಂತಿ ಉಂಟಾಗಲಿದೆ. ಮಹಿಳಾ ಸ್ವ ಸಂಘ ಉತ್ಪನ್ನಗಳ ಮಾರಾಟಕ್ಕೆ ರಾಜ್ಯದ 5 ಸ್ಥಳಗಳಲ್ಲಿ ಶಾಶ್ವತ ಪ್ರದರ್ಶನ ಮಾರಾಟ ಮಳಿಗೆ ನಿರ್ಮಾಣ ಮಾಡಲಾಗುವುದು ಎಂದರು.
ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ದೇಶದ ಅಭಿವೃದ್ಧಿ ಮಾಡುತ್ತಿರುವುದು ನಮ್ಮ ತಾಯಂದಿರು. ಸ್ತ್ರೀ ಸಾಮರ್ಥ್ಯದ ಮೌಲ್ಯಮಾಪನವಾಗಬೇಕು. ಮಹಿಳೆಯರು ನಿರ್ವಹಿಸುವ ಮನೆ ಕೆಲಸ ಹಾಗೂ ಸೇವೆ ಸಾಮಾನ್ಯವಾದುದಲ್ಲ. ಮಹಿಳೆಯರ ಶ್ರಮಕ್ಕೆ ಯಾರು ಬೆಲೆ ನೀಡುವುದಿಲ್ಲ. ಮನೆ ಕೆಲಸ ಮಾಡುವ ಮಹಿಳೆಯರಿಗೂ ಗೌರವ ಸಿಗಬೇಕು. ಅವರ ಕೆಲಸದ ಮೌಲ್ಯ ಮಾಪನವಾಗಬೇಕು. ಅವರ ಕೆಲಸಕ್ಕ ಆದಾಯ ಬರಬೇಕು. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಪುರುಷರ ರೀತಿಯಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ. ಆದರೆ ಅವರಿಗೆ ಕಡಿಮೆ ಕೂಲಿ ನೀಡುತ್ತಾರೆ. ದೀನ ದಲಿತ ಮಹಿಳೆಯರು ಆಹಾರ ಕೊರತೆ ಎದುರಿಸುತ್ತಾರೆ. ಸ್ವಂತ ಭೂಮಿ ಇಲ್ಲದ ಅವರು ಬೇರೆಯವರ ಮನೆ ಹಾಗೂ ಜಮೀನಿನಲ್ಲಿ ದುಡಿಯುತ್ತಾರೆ ಎಂದರು.
ಮಹಿಳೆಯರ ಅಭಿವೃದ್ಧಿಗಾಗಿ ಮುಂದಿನ ಆಯವ್ಯಯದಲ್ಲಿ ವಿಶೇಷ ಯೋಜನೆ ಘೋಷಣೆ ಮಾಡಲಾಗುವುದು. ಸದ್ಯ ಸರ್ಕಾರದಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ 2 ಮಹಿಳಾ ಸಂಘಗಳಿಗೆ 1 ಲಕ್ಷ ಸಹಾಯಧನ ಹಾಗೂ ಬ್ಯಾಂಕ್ ಸಾಲ ನೀಡಿ ಅವರ ಸ್ವ ಉದ್ಯೋಗ ನೆರವು ನೀಡಲಾಗಿದೆ. ಅಮೃತ ಯೋಜನೆಯಡಿ 5,000 ಸಾವಿರ ಮಹಿಳೆಯರಿಗೆ ಸಹಾಯ ಒದಗಿಸಲಾಗಿದೆ. ಬಾಂಗ್ಲಾದೇಶದಲ್ಲಿ ಸ್ತ್ರೀ ಶಕ್ತಿ ಸಂಘದವರು ಸರ್ಕಾರ ಹಾಗೂ ವರ್ಲ್ಡ್ ಬ್ಯಾಂಕ್ ಗಳಿಗೆ ಸಾಲ ಕೊಡುತ್ತಾರೆ. ಹೊಸ ತಂತ್ರಜ್ಞಾನ ಬಳಸಿ ಆಧುನಿಕ ವ್ಯವಸ್ಥೆಗೆ ಹೊಂದುವ ಉತ್ಪನ್ನ ತಯಾರಿಸಿ, ನಿಮ್ಮ ಕುಟುಂಬಗಳು ನೆಮ್ಮದಿಯ ಜೀವನ ನಡೆಸಬೇಕು. ಮಹಿಳೆಯರು ಹೆಚ್ಚು ಪ್ರಾಮಾಣಿಕರು. ಮಹಿಳೆಯರ ಸಾಮರ್ಥ್ಯದ ಮೇಲೆ ನಂಬಿಕೆಯಿಂದ ಹೆಚ್ಚಿನ ಬಂಡವಾಳ ಹೂಡಲು ಸಿದ್ಧನಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
![]() |
![]() |
![]() |
![]() |
![]() |