K2kannadanews.in
Crime News ರಾಯಚೂರು : ಕೇದ ಮೂರು ದಿನಗಳ ಹಿಂದೆ ಬೀದಿ ನಾಯಿ ಜಗಳದಿಂದ ಕೆಳಗೆ ಬಿದ್ದು ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯುವತಿ ಇಂದು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಹೌದು ರಾಯಚೂರು ನಗರದ ವಾರ್ಡ್ ನಂ 23ರ ಮಡ್ಡಿಪೇಟೆ ಬಡಾವಣೆಯಲ್ಲಿನ ಲಕ್ಷಣಸ್ವಾಮಿ ಮಠದ ಹಿಂಭಾಗದಲ್ಲಿ ಡಿ.7 ರಂದು ಮಹಾದೇವಿ(20) ಎಂಬ ಯುವತಿಗೆ ಬೆಳಗೆ 7:30ರ ಸಮಯದಲ್ಲಿ ಮನೆಯ ಮುಂದೆ ಬಿದಿ ನಾಯಿಗಳ ದಂಡು ಜಗಳವಾಡುತ್ತ ಯುವತಿ ಕಡೆಗೆ ನುಗ್ಗಿದ್ದವು, ಈ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಕೂಡಲೆ ರಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ನೀಡಲಾಗಿತ್ತು. ಆದ್ರೂ ತೀವ್ರ ಗಾಯವಾಗಿದ್ದರಿಂದ ರಕ್ತ ಹೆಪ್ಪುಗಟ್ಟಿದ್ದು ಕೋಮದಲ್ಲಿ ಹೋಗಿದ್ದಾಳೆ ಎಂದು ವೈದ್ಯರು ಸ್ಪಷ್ಟಪಡಿಸಿ, ವೈದ್ಯರು ಬಳ್ಳಾರಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ದು, ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಬೆಂಗಳೂರಿಗೆ ಹೋಗಲು ಹೇಳಿದ್ದಾರೆ.
ಈ ಯುವತಿಯ ಕುಟುಂಬವು ತೀವ್ರ ಬಡತನದ ಕುಟುಂಬವಾಗಿದ್ದರಿಂದ ಆರ್ಥಿಕ ವ್ಯವಸ್ಥೆಯಿಲ್ಲದೆ ಪುನಃ ಬಳ್ಳಾರಿಯಿಂದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಸಹ ಚಿಕಿತ್ಸೆ ಮುಂದುವರೆಸಿದ್ದರು. ಆದರೆ ಇಂದು ಸಂಜೆ ವೇಳೆ ಕೊಮಾದಲ್ಲಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದ ಯುವತಿ ಮೃತಪಟ್ಟಿದ್ದಳೆ. ಇನ್ನೂ ಯುವತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.