This is the title of the web page
This is the title of the web page
Sports News

ಕಿವೀಸ್ ವಿರುದ್ಧದ ಮೂರು ಪಂದ್ಯ ಗೆದ್ದು ನಂ.1 ಸ್ಥಾನಕ್ಕೆ ಲಗ್ಗೆ..!


K2 ಸ್ಪೋರ್ಟ್ಸ್ ನ್ಯೂಸ್ : ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ 90 ರನ್ ಗಳ ಜಯಗಳಿಸುವ ಮೂಲಕ ಭಾರತ ತಂಡ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಡುವ ಮೂಲಕ ಸರಣಿ ಕ್ಲೀನ್ ಸ್ವ್ಯಾಪ್ ಮಾಡಿದೆ.

ಕಿವೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಭಾರತ ಚರಿತ್ರೆ ಸೃಷ್ಟಿಸಿದೆ. ಭಾರತ ನೀಡಿದ್ದ 386 ರನ್ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ ತಂಡ 295 ರನ್ ಗಳಿಗೆ ಆಲೌಟ್ ಆಯಿತು. ಈ ವೈಟ್‌ವಾಶ್‌ನೊಂದಿಗೆ ಭಾರತವು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಏಕದಿನ ಫಾರ್ಮ್ಯಾಟ್ ನಲ್ಲಿ ವಿಶ್ವದ ಹೊಸ ನಂ.1 ತಂಡವಾಗಿ ಹೊರಹೊಮ್ಮಿತು. ಈ ಪಂದ್ಯದಲ್ಲಿ ಭಾರತ 90 ರನ್‌ಗಳಿಂದ ಕಿವೀಸ್ ತಂಡವನ್ನು ಸೋಲಿಸಿ 3-0 ಅಂತರದಿಂದ ಸರಣಿ ವಶಪಡಿಸಿಕೊಂಡಿತು.


[ays_poll id=3]