
ರಾಯಚೂರು : ಒಂದು ಕಡೆ ವಿದ್ಯುತ್ ಖಚಿತ 2000 ಉಚಿತ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಸುಭದ್ರ ಸರ್ಕಾರ ಇದ್ದಾಗ ಇದನ್ನು ಯಾಕೆ ಕೊಡಲಿಲ್ಲ, ತೆವಲು ತೀರಿಸಿಕೊಳ್ಳಲು ಹೋದ ಬಿಸಿ ಪಾಟೀಲ್ ಜೆಡಿಎಸ್ ಬಗ್ಗೆ ಯಾಕೆ ಮಾತನಾಡುತ್ತಾರೆ ಎಂದು ಅಸಮಾಧಾನ ಹೊರ ಹಾಕಿದ ಮಾಜಿ ಸಿಎಂ ಕುಮಾರಸ್ವಾಮಿ.
ರಾಯಚೂರು ಗ್ರಾಮಾಂತರ ಕ್ಷೇತ್ರದ ಕಲ್ಮಲಾ ಗ್ರಾಮದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು. ಐದು ವರ್ಷ ಸರ್ಕಾರ ನಡೆಸಿ ಹಲವು ಭಾಗ್ಯಗಳನ್ನು ಕೊಟ್ಟ ಸಿದ್ದರಾಮಯ್ಯ ವಿದ್ಯುತ್ ಖಚಿತ, 2000 ಉಚಿತ ಯೋಜನೆಗಳ ಬಗ್ಗೆ ಸುಭದ್ರ ಸರ್ಕಾರ ಇದ್ದಾಗ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಒಂದು ಸರ್ಕಾರ ಇಲ್ಲದ ಕಾರಣ ನಾನು ಕೆಲಸ ಮಾಡಲು ಆಗಲಿಲ್ಲ, ಹಾಗಾಗಿ ಈಗ ಜನರ ಬಳಿ ಅಧಿಕಾರ ಕೊಡಿ ಅಂತ ಕೇಳಲು ಬಂದಿದ್ದಾನೆ. ಇನ್ನೂ ಬಿಸಿ ಪಾಟೀಲ್ ಜೆಡಿಎಸ್ ಕಾಂಗ್ರೆಸ್ ವಿರುದ್ಧ ಹೇಳಿದ ಮಾತಿಗೆ ಟಾಂಗ್ ನೀಡಿದ ಕುಮಾರಸ್ವಾಮಿಯವರು. ಯಾರು ಹೇಯ ಕೃತ್ಯ ಮಾಡುವುದಿಲ್ಲ, ತೆವಲು ತೀರಿಸಿಕೊಳ್ಳಲು ಹೋದವರು ಜೆಡಿಎಸ್ ಕಾಂಗ್ರೆಸ್ ಬಗ್ಗೆ ಮಾತನಾಡಿದ್ರೆ ಹೇಗೆ ಎಂದು ಕುಮಾರಸ್ವಾಮಿ ಖಾರವಾಗಿ ಟಾಂಗ್ ನೀಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]